Home / ಕಥೆಗಳು / ಅಂತರ್‌ದೇಶಿ…..(ಭಾಗ 1)

ಅಂತರ್‌ದೇಶಿ…..(ಭಾಗ 1)

ಸುತ್ತಲೂ ವಾಹನಗಳ ಓಡಾಟ. ಕುಮಾರ ಕಾಫೀ ಶಾಪ್ ಹೋಟೆಲ್ ನಲ್ಲಿ ಕಾಫೀ ಆರ್ಡರ್ ಮಾಡಿ ಕುಳಿತಿದ್ದ ನನಗೆ ಮಳೆಯ ಶಬ್ದ ಕಿವಿಯಲ್ಲಿ ಪ್ರತಿಧ್ವನಿಸುತ್ತಿತ್ತು. ಗ್ಲಾಸ್ ಹೊರಗಡೆ ಮಳೆಯ ಹನಿಗಳೇ ಕಾಣುತ್ತಿಲ್ಲ.!!!
ದೂರದಲ್ಲಿ ರಸ್ತೆಯ ಆಚೆ ಓರ್ವ ಮುದುಕ ಕೈಯಲ್ಲಿ ಚೀಲ ಇನ್ನೊಂದು ಕೈಯಲ್ಲಿ ಬಣ್ಣದ ಬಲೂನುಗಳು. ಎಲ್ಲ ಕಪ್ಪು ಬಣ್ಣದ್ದು ಎರಡು ಮಾತ್ರ ನೀಲಿ ಬಣ್ಣದ್ದು.
ಇಳೀ ವಯಸ್ಸು, ಮಂಜುಗಣ್ಣು ಅನಿಸುತ್ತೆ. ಏನೋ ಸನ್ನೆ ಮಾಡುತ್ತಿದ್ದಾರೆ, ಯಾರೂ ತಿರುಗಿ ನೋಡುತ್ತಿಲ್ಲ ಅವರಿಗೆ ರಸ್ತೆ ದಾಟಿಸಬೇಕು ಅನಿಸುತ್ತೆ.

ಮಳೆ ಶುರುವಾಯಿತು ಪಾಪ ಅವರು ನೆನೆಯುತ್ತಿದ್ದರೆ ಎಂದು ಅವರ ಛತ್ರಿಯನ್ನು ಬಿಡಿಸಿ ಹಿಡಿದು ರಸ್ತೆ ಈಚೆಗೆ ಕರೆದುಕೊಂಡು ಬಂದೆ.(ನನ್ನ ಬಳಿ ಛತ್ರ ಇರಲಿಲ್ಲ)
“ತುಂಬಾ ಸಂತೋಷ ಕಣಪ್ಪಾ ಮಗ. ದೇವ್ರು ಒಳ್ಳೆದು ಮಾಡ್ಲಿ” ಅಂತ ಹೇಳಿ ಕುಳಿತುಕೊಂಡರು.
ಅರ್ಧ ಕುಡಿಡಿಟ್ಟ coffe ನೆನಪಾಯಿತು. ಬಿಲ್ ಬೇರೆ ಕೊಟ್ಟಿರಲಿಲ್ಲ.
ಅಜ್ಜಾ ಟೀ ಕುಡೀತೀರಾ???….ಅಂದೆ
ಬೇಡ ಕಣಪ್ಪಾ…!! ಅಂದ್ರು.
ಬನ್ನಿ ಪರವಾಗಿಲ್ಲ ಅಂತ ಹೇಳಿ ಹೋಟೆಲ್ ಒಳಗಡೆ ಕರಕೊಂಡು ಹೋದೆ. ಬಲೂನು ಗಳನ್ನ ಹಿಡಿದುಕೊಂಡು……

ಹೋಗಿ ಇನ್ನೆರಡು ಕಾಫೀ ಆರ್ಡರ್ ಮಾಡಿದೆ.
ಅಜ್ಜ ನಿಮ್ಮ ಹೆಸರೇನು??
ಅವರು ಒಮ್ಮೆ ಮುಗುಳ್ನಕ್ಕು ಹೆಸರು ಹೇಳಿದರು. ಹೆಸರು ಕೇಳಿ ಒಂದು ಕ್ಷಣ ನನಗೆ ಶಾಕ್ ಆಗಿತ್ತು…….

(ಮುಂದುವರೆಯುವುದು……)

Leave a Reply

Your email address will not be published. Required fields are marked *