Home / ಭಾವನೆಗಳ ಬಾಗಿಲು ತೆರೆದು / ಈ ಹೊಸ ಯೋಚನೆ…ಅದೆಷ್ಟು ದಿನವೋ???

ಈ ಹೊಸ ಯೋಚನೆ…ಅದೆಷ್ಟು ದಿನವೋ???

ಲಂಕೇಶ್ ಪತ್ರಿಕೆ ಓದಿ ಪ್ರೇರಿತರಾದ ನಾವು ಚಿಕ್ಕ ವಯಸ್ಸಿನಲ್ಲೇ ಕಾದಂಬರಿ ಬರೆದು ಸಾಧನೆ ಮಾಡಬೇಕು ಅಂತ ನಿರ್ಧಾರ ಮಾಡಿದ್ವಿ. ಸ್ಕೂಲ್ ನಲ್ಲಿ ಆಗಸ್ಟ್ 15 ರಂದು ಭಾಷಣ ಸ್ಪರ್ಧೆಯಲ್ಲಿ ಬಹುಮಾನವಾಗಿ 200 ಪೇಜ್ ನ ಒಂದು ನೋಟ್‌ಬುಕ್ ಕೊಟ್ಟಿದ್ದರು.ಮಹಾನ್ ಲೇಖಕರಾದ ನಾವು ಫ್ರಂಟ್ ಪೇಜ್ ನಲ್ಲಿ ಕಾದಂಬರಿ ನಾಮಕರಣ ಬೇರೆ ಮಾಡಿದ್ದೆವು.

“ಪ್ರೇಮಯುಗ” ಅಂತ ಹೆಸರು.

ನಾವು ಓದುತ್ತಿದ್ದಿದ್ದು 3 ನೆಯ ತರಗತಿ ಆವಾಗ. ಒಂದು ವಾರ,ಎರಡು ವಾರ ಕಳೆಯಿತು. ನಾಮಕರಣದ ಹೊರತಾಗಿ ಏನು ಮೂಡಲಿಲ್ಲ. ಒಂದು ಸಂಜೆ ಭಾನುವಾರ ಊಟ ಮಾಡಿ….ಶಕ್ತಿಮಾನ್ ನೋಡಿ( ಆಗ ನಮ್ಮ ಊರಲ್ಲಿ ಕೇಬಲ್ ಇರಲಿಲ್ಲ. ಟೀವೀ ಯಲ್ಲಿ ಬರುತ್ತಿದ್ದಿದ್ದು ಒಂದೇ ಚ್ಯಾನೆಲ್ DD1) ಸ್ಟಾರ್ಟ್ ಮಾಡದೆ ನೋಡಿ…3 ನೇ ಪೇಜ್ ಗೆ ಕ್ಲೈಮ್ಯಾಕ್ಸ್ ಬಂದಿತ್ತು.
ಅಸಹಾಯಕ ಹಾಗೂ ಪ್ರಾಮಾಣೀಕರದ ನಾವು! ,

“ನಿನ್ನ ಮೂತಿಗೆ ಕಾದಂಬರಿ ಬೇರೆ ಕೇಡು” ಅಂತ ನಮಗೆ ಹೇಳಿಕೊಂಡು ಚ್ಯಾಪ್ಟರ್ ಕ್ಲೋಸ್ ಮಾಡಿದ್ವಿ.

ಆಮೇಲೆ ನಾವು ಓದದ್ರಲ್ಲಿ & ಇತರೆ ಕಾರ್ಯ ಚಟುವಟಿಕೆಗಳಲ್ಲಿ ಬ್ಯುಸಿ ಆದ್ವಿ. ಮಧ್ಯ ಸಮಯ ಸಿಕ್ಕಾಗೆಲ್ಲ ಕವನ, ನಾಟಕ ಬರೀತಾ ಇದ್ದೆ.
ನಮ್ಮ ಗುರುಗಳು ಒಬ್ರು ಹೇಳ್ತಿರೋರು..”ವಿಶು ನೀನು ಮುಂದೆ ಶಂಕರ್ ನಾಗ್ ತರ ಡೈರೆಕ್ಟರ್ ಆಗ್ಬೇಕು” ಅಂತ…
ಥೂ…!!!! ಈ ಮಾತು puc science ತಗೋಲ್ವಾಗ ಇಲ್ಲ cet ಸೀಟ್ ಸೆಲೆಕ್ಷನ್ ಮಡ್ವಾಗ್ ಒಂದ್ ಸಲ ನೆನಪು ಬರ ಬಾರದಿತ್ತೆ…????

ಹೋಗ್ಲಿ ಬಿಡಿ ಇನ್ನೂ ಕಾಲ ಮಿಂಚಿಲ್ಲ. ಯಾರ್ ಯಾರಿಗೋ ಸಾಯೋ ಟೈಮ್ನಲ್ಲಿ ನಾವು ಅದು ಮಾಡ್ಬೇಕಿತ್ತು, ಇದು ಮಾಡ್ಬೇಕಿತ್ತು ಅಂತ ಯೋಚನೆ ಬರತ್ತಂತೆ. ನಮ್ಮದಿನ್ನೂ ಎಳೆ ವಯಸ್ಸು. ನೀನೇ ಮೊನ್ನೆ ಒಂದಿಬ್ಬರು ಚಿಕ್ಕ ಮಕ್ಕಳು uncle ಅಂತ ಕರೆದಿದ್ದು ಬಿಟ್ಟರೆ……..
ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಆಫೀಸ್ ಸಿಸ್ಟಮ್ ಮುಂದೆ ಕನ್ನಡ blog ಬರೆದು ಕನ್ನಡ ಸಾಹಿತ್ಯಕ್ಕೆ ಅಳಿಲು ಸೇವೆ ಮಾಡೋಣ ಅಂತ ಯೋಚನೆ ಮಾಡ್ತ ಇದೀನಿ.

ಏನು ಕಾದಿದೆಯೋ ಮುಂದೆ….!!!?????

Leave a Reply

Your email address will not be published. Required fields are marked *