Home / ಭಾವನೆಗಳ ಬಾಗಿಲು ತೆರೆದು / ಅಲೆಮಾರಿಗಳ ಜಗತ್ತಿನಲ್ಲಿ ಅಪರಿಚಿತರು ಯಾರು?(ಭಾಗ 13)

ಅಲೆಮಾರಿಗಳ ಜಗತ್ತಿನಲ್ಲಿ ಅಪರಿಚಿತರು ಯಾರು?(ಭಾಗ 13)

img_1284

ನೀಲಾಕಾಶಂ ಪಚ್ಚ ಕಡಲ್ ಚುವ್ವನ ಭೂಮಿ…..ಇದು ಕೂಡ ನಮ್ಮ ಬೈಕ್ ರೈಡ್ ಗೆ ಪರೋಕ್ಷ ಕಾರಣ ಎನ್ನಬಹುದು. ಪ್ರತಿಯೊಬ್ಬ ಹವ್ಯಾಸಿ ಬೈಕರ್ ಕೂಡ ತನ್ನನ್ನು ಅಲ್ಲಿ ತೆರೆಯ ಮೇಲೆಕಲ್ಪಿಸಿಕೊಂಡು 
ಮಗ್ನನಾಗುವಂತಹ ಮಲಯಾಳಂ ಚಲನಚಿತ್ರವದು. ನಮ್ಮಂತೆಯೇ ಇನ್ನೂ ಎಷ್ಟೋ ಯುವಕರಲ್ಲಿ ಬುಲೆಟ್ ನಲ್ಲಿ ಒಮ್ಮೆಯಾದರೂ
ಲಾಂಗ್ ರೈಡ್ ಮಾಡಬೇಕು ಎಂಬಆಸೆ ಹುಟ್ಟಿಸುತ್ತದೆ ಎಂಬುವುದಂತೂ ಸತ್ಯ. ಆ ಚಲನಚಿತ್ರದ ಪೋಸ್ಟರ್ ಪೋಸ್ ಅಲ್ಲಿ
ಒಂದು ಫೋಟೋ ತೆಗೆಸಿಕೊಂಡು ಫೇಸ್ಬುಕ್ ಕವರ್ ಇಮೇಜ್ ಮಾಡಬೇಕು ಎಂಬುದು ಆ ಚಲನಚಿತ್ರ ನೋಡಿದ ಕ್ಷಣದಿಂದ ಹುಟ್ಟಿದ್ದ ಆಸೆಯಾಗಿತ್ತು. ಸೂಕ್ತ ಸ್ಥಳದ ಕೊರತೆ ಇಂದು ನಿವಾರಣೆ ಆಗಲಿತ್ತು.

ನಿದ್ದೆ ಮೋಸ ಮಾಡಲಿಲ್ಲ. ಬೆಳಿಗ್ಗೆ ಎದ್ದು ಮುಖ ತೊಳೆದು ಮೊದಲು ಮಾಡಿದ ಕೆಲಸ ಶಿಫ್ಟಿಂಗ್. ಕಟ್ಪಾ ರೆಸಿಡೆನ್ಸೀ ಎಂಬ 
ಹೋಟೆಲ್ ಗೆ ನಮ್ಮ ಎಲ್ಲ  ಶಿಫ್ಟ್ ಮಾಡಿ, ರಾತ್ರಿ ಮಲಗಲು ಸೂರುಕೊಟ್ಟ ಈ ಹೋಟೆಲ್ ಮ್ಯಾನೇಜರ್ ಗೆ ಥ್ಯಾಂಕ್ಸ್ ಹೇಳಿ
ಅಲ್ಲಿಂದ ಹೊರಟೆವು. ಸುತ್ತ ಕಾಂಪೌಂಡ್. ಮಧ್ಯದಲ್ಲಿ ಸ್ತೂಪದಂತಿರುವ ಒಂಟಿ ಮನೆ. ಕೆಳಗಡೆ ಒಂದು ಪುಟ್ಟ ರೆಸ್ಟೋರಂಟ್,
ಮೇಲಿನ ಮಹಡಿಯಲ್ಲಿ ವಿಶಾಲವಾಗಿರುವ ಏಳೆಂಟು ರೂಮ್ಗಳು.  ಕಳೆದ ರಾತ್ರಿಯ ಕರಾಳ ನೆನಪು ಈ ಹೋಟೆಲ್ ನೋಡಿದಾಗ ಮರೆದು ಹೋಗಿದ್ದಂತೂ ನಿಜ. 
ಪ್ರವಾಸಿಗರನ್ನುಮನೆಯವರಂತೆ ಮಾತನಾಡಿಸಿ ಆಧರಿಸುವ ಆ ಹೋಟೆಲ್ ನ ಮಾಲಿಕ ಕೆಲವೇ ಕ್ಷಣಗಳಲ್ಲಿ ಸ್ನೇಹಿತನಾಗಿದ್ದ.

ಚೆಕ್ಇನ್ ಆಗಿ ಮೊದಲು ಸ್ನಾನ ಮಾಡಿ ಸ್ವಲ್ಪ್ ರೆಸ್ಟ್ ಬೇಕು ಎಂದು ಮಲಗಿ ಎದ್ದಾಗ 2 ಘಂಟೆಯಾಗಿತ್ತು. 
ಲೇಹ್ ನ ಪ್ರಮುಖ ಬೀದಿಯಲ್ಲಿರುವ ಗ್ರ್ಯಾಂಡ್ ವಾಜ಼ಿರ್ ಪ್ಯಾಲೇಸ್ ಎಂಬ ಹೋಟೆಲ್ ಗೆ ಹೋಗಿ ಊಟ ಮುಗಿಸಿ
ಕನಸಿನ ಖಾರಾ-ದುಂಗ್ಲಾ ಕಡೆಗೆ ಹೊರಟೆವು.

ಸುಮಾರು 17582ಫೀಟ್ ಎತ್ತರದಲ್ಲಿರುವ ಖಾರಾ-ದುಂಗ್ಲಾ ಜಗತ್ತಿನಲ್ಲಿಯೇ ಅತಿ ಎತ್ತರದ ವಾಹನಗಳು ಚಲಿಸುವ ಪಾಸ್
ಎಂದು ಹೆಸರುವಾಸಿಯಾಗಿದೆ. ಲೇಹ್ ನಗರದಿಂದ 39 ಕಿಲೋ ಮೀಟರ್ ದೂರವಿರುವ ಖಾರಾ-ದುಂಗ್ಲಾ ಹೊರಡುವಾಗ
ಮೊದಲು ಸಿಗುವುದು ಸೌತ್ ಪುಲ್ಲು ಚೆಕ್-ಪೋಸ್ಟ್. ಅಲ್ಲಿ ನಮ್ಮಬೈಕ್ ನಾ ಎಂಟ್ರೀ ಮಾಡಿಸಿ ಸುಮಾರು 15 km ಕಚ್ಚಾ
ರಸ್ತೆಯಲ್ಲಿ (ಇಲ್ಲೂ ಸಹ ರಸ್ತೆ ಕಾಮಗಾರಿ ಅಂತಿಮ ಹಂತದಲ್ಲಿತ್ತು.) ಚಲಿಸಿ ಖಾರಾ-ದುಂಗ್ಲಾ  ತಲುಪಿದಾಗ
ಉಸಿರಾಟದಲ್ಲಿ ಏನೋ ಬದಲಾವಣೆ ಅನಿಸಿತು.

ಎಲ್ಲೆ ಹೋದರೂ ನಮ್ಮ ಕನ್ನಡದ ಕಂಪು ರಾರಾಜಿಸುತ್ತಿತ್ತು. ಹಲವಾರು ಬೆಂಗಳೂರು ಪಾಸಿಂಗ್ ನಾ ಬೈಕ್ ಗಳು ನೋಡಿದಾಕ್ಷಣ ಅವರೊಂದಿಗೆಮಾತನಾಡಿ ಫೋಟೋಗಳನ್ನು ತೆಗೆಸಿಕೊಂಡೆವು. ಆ ಎತ್ತರದಲ್ಲಿ ಕೆಲವರಿಗೆ ಉಸಿರಾಟದ ತೊಂದರೆ ಆಗುತ್ತಿತ್ತು.
ಹಲವರು ಅಲ್ಲಿ ಇರಲಾರದೆ ಲೇಹ್ ಕಡೆಹೊರಟುಹೋದರು. ಖಾರಾ-ದುಂಗ್ಲಾ ದಲ್ಲಿರುವ ಜಗತ್ತಿನಲ್ಲಿಯೇ ಅತಿ ಎತ್ತರದಲ್ಲಿರುವ
ಹೋಟೆಲ್ ಎಂದು ಕರೆಸಿಕೊಳ್ಳುವ ಚಿಕ್ಕ ಹೋಟೆಲ್‌ನಲ್ಲಿ ಚಹಾಕುಡಿದಿದ್ದು ನಮ್ಮ ಸಾಧನೆಯಾಗಿತ್ತು. ಆ ಬೋರ್ಡ್ ನಾ ಹತ್ತಿರ
ಫೋಟೋ ತೆಗೆಸಿಕೊಳ್ಳಲು ಜನರು ಮೂಗಿ ಬೀಳುತ್ತಿರುವಾಗ, ಕನ್ನಡ ದ ಬಾವುಟಹಿಡಿದುಕೊಂಡು ಹೋಗಿ ಅದನ್ನು ಅಲ್ಲಿ ಕಟ್ಟಿ,
ಕೀರ್ತಿ ಪತಾಕೆ ಹಾರಿಸಿ ನಾವು ನಮ್ಮ ಫೋಟೋಗಳನ್ನು ತೆಗೆಸಿಕೊಂಡೆವು.

ಮನಾಲಿ ಕಡೆಯಿಂದ ಲೇಹ್ ಗೆ ಹೋಗುವವರು ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಒಂದು ದಿನ ಲೇಹ್ ನಲ್ಲಿಯೇ
ಉಳಿದು ನಂತರ ಖಾರಾ-ದುಂಗ್ಲಾ ಹೋಗುತ್ತಾರೆ. ಅರ್ಧದಷ್ಟು ಜನರಲ್ಲಿ ಈ ತೊಂದರೆ ಕಾಣುವುದು ಸಹಜವಂತೆ. ನಾವು
ಶ್ರೀನಗರ ದ ಕಡೆಯಿಂದ ಬಂದಿರುವುದರಿಂದ ನಮಗೇನುಅಷ್ಟು ತೊಂದರೆ ಆಗಲಿಲ್ಲ ಅನಿಸಿತು. ಕೊನೆಗೂ ನಮ್ಮ ನೀಲಾಕಾಶಂ… ಶೈಲಿಯ ಫೋಟೋ ತೆಗೆಸಿಕೊಂಡು, ಹೆಪ್ಪುಗಟ್ಟಿರುವ ಮಂಜಿನಲ್ಲಿ ಆಟವಾಡಿ, ಸ್ವಲ್ಪ ಸಮಯ ಕಳೆದು, ನುಬ್ರಾ ಕಡೆಗೆ
ಹೊರಟಿರುವ ಬೆಂಗಳೂರಿನ ಸ್ನೇಹಿತರಿಗೆ ಶುಭ ಹಾರೈಸಿ, ನುಬ್ರಾ ದಲ್ಲಿ ಸಿಗುವ ವಿಶೇಷ ಒಂಟೆಗಳಫೋಟೋಗಳನ್ನು ನಮಗೆ ಕಳುಹಿಸುವಂತೆ ಹೇಳಿ ಅಲ್ಲಿಂದ ಲೇಹ್ ಕಡೆಗೆ ಹೊರಟೆವು.

img_1418

ಅಲ್ಲಲ್ಲಿ ಕಾಣುವ ಬೋರ್ಡ್ ಗಳಲ್ಲಿ ನೀವು, ಜಗತ್ತಿನ ಅತಿ ಎತ್ತರದ ರೋಡ್ ನಲ್ಲಿ ಚಲಿಸುತ್ತಿದ್ದೀರ ಎಂದು ಬರೆದದ್ದನ್ನು ಓದಿ
ಒಮ್ಮೆ ಯಾರೋ ಬೆನ್ನು ತಟ್ಟಿದಅನುಭವ. ಒಂದು ಬದಿಯಲ್ಲಿ ಕಾಣುವ ಲೇಹ್ ನಗರ, ದೂರದಲ್ಲಿ ಮಣ್ಣಿನ ಹುತ್ತಗಳಂತಿರುವ
ಗುಡ್ಡಗಳನ್ನು ದಾಟಿ ಮುಳುಗುತ್ತಿರುವ ಕೆಂಪು ನಕ್ಷತ್ರಸೂರ್ಯ, ಇಡೀ  ನಗರವನ್ನು ಆವರಿಸಲು ಸಜ್ಜಾಗಿರುವ ಮಂಜು ಒಂದು ಬದಿಯಲ್ಲಿ.

img_1297

ಲೇಹ್ ನಗರವನ್ನು ತಲುಪಿ, ಇನ್ನೊಮ್ಮೆಆ ಚಳಿಗೆ ಬಿಸಿ ನೀರಿನಲ್ಲಿ ಸ್ನಾನ ಮಾಡಿ, ಲೇಹ್ ಮಾರ್ಕೆಟ್ ಗೆ ಶಾಪಿಂಗ್ ಮಾಡಲು ಹೊರಟೆವು. ಬೈಕರ್, ರೈಡರ್ ಗಳಿಗೆ ಮತ್ತು ಲೇಹ್ ಮಾರ್ಕೆಟ್ ಗೆ ಒಂದು ಅವಿನಾಭಾವ ಸಂಬಂದವಿರುವುದು ಸುಮಾರು
ಜನರಿಗೆ ತಿಳಿದಿರಲೇಬೇಕು. ಅಲ್ಲಿ ದೊರೆಯುವಲಡಾಖ್ ಫ್ಲ್ಯಾಗ್ ನೀವು ಪ್ರತಿ ಊರಿನಲ್ಲೂ ಇಂದು ಕಾಣಬಹುದು. ಲಡಾಖ್
ಹೋಗಿ ಬಂದಿರುವುದರ ಸಂಕೇತವದು. ಆದರೆ ಇಂದು ಅದಕ್ಕೆ ಬೆಲೆಯೇಇಲ್ಲದಂತಾಗಿ ಎಲ್ಲ ಕಡೆ ಅದನ್ನು ಮಾರಾಟ ಮಾಡುತ್ತಿದ್ದಾರೆ. ಆನ್‌ಲೈನ್ ಅಲ್ಲಿ ಒಂದಕ್ಕೆ ಎರಡರಷ್ಟು ಬೆಲೆಗೆ ಕೊಳ್ಳುವವರು ಕಡಿಮೆಯೇನಿಲ್ಲ.

ಮನೆಯವರಿಗೆ ಹಾಗೂ ಎಲ್ಲ ಸ್ನೇಹಿತರಿಗೆ ಗಿಫ್ಟ್ಸ್ ಗಳನ್ನು ಖರೀದಿಸಿ, ಮಧ್ಯಾಹ್ನ ಊಟ ಮಾಡಿದ ಹೋಟೆಲ್ ಗೆ ಹೋಗಿ ಮತ್ತೆ
ನಾನ್-ವೆಜ್ ಊಟ ಮಾಡಿನಮ್ಮ ಹೋಟೆಲ್ ಗೆ ಹೊರಟೆವು. ನಮಗಾಗಿ ಊಟಕ್ಕೆ ಕಾಯುತ್ತಿದ್ದ ಹೋಟೆಲ್ ನಾ ಮಾಲೀಕರು ಇನ್ನೂ ಊಟ ಮಾಡಿರಲಿಲ್ಲ. ಅವರೊಂದಿಗೆ ಕುಳಿತುಇನ್ನೊಮ್ಮೆ ಊಟ ಮಾಡಬೇಕಾದ ಪರಿಸ್ಥಿತಿ ಬಂದಿತ್ತು. ಆಂಟೀ ಲೇಹ್ ನ ವಿಶೇಷ
ಎಂದು ತುಪು ನೂಡಲ್ಸ್ ಮಾಡಿ ಬಡಿಸಿದರು. ನಮಗೋಸ್ಕರಯಾವುದೋ ಹೋಟೆಲ್ ನಿಂದ ಸ್ಪೆಶಲ್ ಚಿಕನ್ ಡಿಶ್ ತರಿಸಿ ಇಟ್ಟಿದ್ದರು. ಊಟದ ನಂತರ ಅವರಲ್ಲಿ ಚಹಾ ಮಾಡಿಸಿಕೊಂಡು ಕುಡಿದು ರೂಮ್ ಗೆ ಹೋಗಿಮಲಗಿದೆವು.

ಬೆಳಿಗ್ಗೆ ಎದ್ದು ಜಗತ್ಪ್ರಸಿದ್ದ ಪೆಂಗೊಂಗ್ ಲೇಕ್ ನೋಡಲು ಹೋಗಬೇಕು. ಅಷ್ಟರಲ್ಲಿ ಅಪ್ಪನ ಕರೆ ಬಂತು. ನಾನು ಕಾಲ್ ರಿಸೀವ್
ಮಾಡಿ “ಬಾಬಾ..!! ಮನೆಯಲ್ಲೇ ಇದ್ದೇನೆ” ಎಂದು ಹೇಳಿ ಕಾಲ್ ಕಟ್ ಮಾಡಿದಾಗ, ಆಕಾಶ್ ನಗುತ್ತಿದ್ದ.

(ಮುಂದುವರೆಯುವುದು…..)

Leave a Reply

Your email address will not be published. Required fields are marked *