Home / ನಾವು ಕವಿಗಳಾದಾಗ...!!!!! / ಬೆರಳೆಣಿಕೆ ಸಾಲುಗಳಿಗೆ ಸೀಮಿತವಾದ ಕವನಗಳು

ಬೆರಳೆಣಿಕೆ ಸಾಲುಗಳಿಗೆ ಸೀಮಿತವಾದ ಕವನಗಳು

ನಾ ಕನ್ನಡಿ..!!!

ಇಬ್ಬನಿಯ ಮಾಲೆ ಕಾಯುತಿದೆ ನಿನ್ನ ಶೃಂಗಾರಕೆ.
ಮಲೆನಾಡಿನ ಹಸಿರು ನಿನ್ನ ಹೂವಾಗಿ,
ನೇಸರ ನಾಚಿ ನೀರಾಗಿ ನಿನ್ನ ಕುಂಕುಮವಾಗಿ,
ಕನ್ನಡಿಯಾಗಿ ನಾ ಹುಡುಕುತ್ತಿರುವೆ ನಿನ್ನನು……..

—————————————————————————————

ಕೋರಿಕೆ

ಈ ಕ್ಷಣ ಸಾಗರದ ಅಲೆಗಳಂತಿರಲಿ
ತೀರದ ಸ್ನೇಹಕೆ ಮರಳಿ ಬರುತಿರಲಿ.

ಈ ನಿನ್ನ ಜನ್ಮ ದಿನ ಎಂದಿಗೂ ನೆನಪಿರಲಿ,

ತೀರದಲಿ ಓದಬೇಕಿರುವ ಪುಸ್ತಕ ಜೀವನ.

ತಂಗಾಳಿ ತೆರೆಯುವ ಪ್ರತೀ ಪುಟದಲಿ,

ಮತ್ತೆ ಇದೇ ತೀರ,ಇದೇ ಸಂಜೆಯಿರಲಿ……

—————————————————————————————

ಬೆಳದಿಂಗಳೂಟ

ಮರಳಿ ಬರದು ಆ ಸಂಜೆ,ಅದು ಮಧುರ.

ಕಣ್ಣ ರೆಪ್ಪೆಯಲಿ ಅರ್ಥವ ಮರೆತ ಅಳುವಿನ ಅಲಂಕಾರ.

ಅಲ್ಲಿ ಕಡಲು,ಹುಣ್ಣಿಮೆ ಚಂದ್ರನಿಗೆ ತೆಂಗಿನ ಗರಿಯ ಒಡಲು.
ಕತ್ತಲಲಿ ಕೈತುತ್ತು,ಬೆಚ್ಚಗೆ ಅಮ್ಮನ ಮಡಿಲು.

—————————————————————————————

ಕಡಲು

ಸಾಲುಗಳು ಇರುಳಿನ ನೆರಳಲಿ ಮೂಡಲಿ.

ಸ್ಪೂರ್ತಿಯು ನಿನ್ನ ಮಾತಲಿ ಮೆರೆಯಲಿ.
ಮರಳಲಿ ಮೂಡಲಿ ಕವನ ಯಾರಿಗೂ ಕಾಣದಂತೆ,
ಭಾವನೆಗಳ ಬಳೆಗಳ ಬಿಡಿಸಲಿ,
ಪ್ರೀತಿಯ ಆಳ ಸಾಗರದಲಿ ಸಾಗಲಿ…
ನಾನು ಅಂಬಿಗ ನೀನೇ ದೋಣಿಯಂತೆ……

—————————————————————————————

Leave a Reply

Your email address will not be published. Required fields are marked *