Home / ಭಾವನೆಗಳ ಬಾಗಿಲು ತೆರೆದು / ಅಲೆಮಾರಿಗಳ ಜಗತ್ತಿನಲ್ಲಿ ಅಪರಿಚಿತರು ಯಾರು?(ಭಾಗ 11)

ಅಲೆಮಾರಿಗಳ ಜಗತ್ತಿನಲ್ಲಿ ಅಪರಿಚಿತರು ಯಾರು?(ಭಾಗ 11)

ನಮ್ಮಂತೆಯೇ ಸುಮಾರು ಜನರು ಶ್ರೀನಗರ ಬಿಟ್ಟು ಹೊರಡುತ್ತಿದ್ದರು. ಯಾವುದೋ ಒಂದು ಟೊಯೋಟಾ ಇನ್ನೋವಾ ಫಾಲೊ ಮಾಡಿ ಸೋನ್ ಮಾರ್ಗ್ ದಾರಿ ಹಿಡಿದು ಹೊರಟಾಗ ಎಷ್ಟೊತ್ತಿಗೆ ವಯುಲ್ಸೇರುತ್ತಿವೋ ಎಂಬ ಆತಂಕ. ಊರು ದಾಟುವಾಗ ಯಾರೋ ತಡೆದು ಟೋಲ್ ಎಂದು 80 ರೂಪಾಯಿ ಕೇಳಿದಾಗ ಅವರಿಗೆ ಪ್ರಶ್ನೆ ಕೇಳುವ ದುಸ್ಸಾಹಸ ಮಾಡದೆ ಅಲ್ಲಿಂದ ಹೊರಟೆವು. ಶ್ರೀನಗರದಿಂದ ಆಚೆಹೋಗುತ್ತಿದ್ದಂತೆ ಚಳಿಯ ಪ್ರಭಾವ ಹೆಚ್ಚಾಗತೊಡಗಿತು. ಹೈವೇ ಪಕ್ಕದಲ್ಲಿದ್ದ ಒಂದು ಹೋಟೆಲ್ ನವನು ನಮ್ಮ ಬುಲೆಟ್ ಶಬ್ದ ಕೇಳಿ ನಿದ್ದೆಗಣ್ಣಲ್ಲಿ ಎದ್ದು ಕುಳಿತ. ಚಳಿಗೆ ಬಿಸಿಬಿಸಿಯಾಗಿ ಏನಾದರೂ ಮಾಡಿ ಕೊಡುಅಣ್ಣಾ ಎಂದು ಕೇಳಿದಾಗ ಅವನು ಹೊದ್ದ ಕಂಬಳಿಯೊಂದಿಗೆ ಆಚೆ ಬಂದು ನಗುತ್ತಾ ಬ್ರೆಡ್ ಆಮ್ಲೆಟ್ ಮಾಡಿ ಕೊಡುವುದಾಗಿ ಹೇಳಿ ಮುಖ ತೊಳೆಯಲು ಹೊರಟ. ಅದೇ ಹೊತ್ತಿಗೆ ಇಸ್ರೇಲಿಗಳಿಬ್ಬರು ಬುಲ್ಲೇಟ್ನಲ್ಲಿಲೇಹ್ ಕಡೆಗೆ ಹೊರಟಿದ್ದರು. ನಮ್ಮನ್ನು ಕಂಡು ಅವರು ಬಂದು ಪಕ್ಕದಲ್ಲಿ ಕುಳಿತರು. ಅವರಿಗೂ ಸೇರಿಸಿ ನಾಲ್ಕು ಕಾಶ್ಮೀರಿ ಖಾವಾ ಆರ್ಡರ್ ಮಾಡಿ ಅವರೊಂದಿಗೆ ಮಾತಿಗಿಳಿದೆವು. ಅವರ ದೇಶದ ಬಗ್ಗೆಹೇಳಿದರು. ನಮ್ಮ ದೇಶದ ಬಗ್ಗೆ ಹೇಳುವ ಅನಿವಾರ್ಯತೆ ಇರಲಿಲ್ಲ. ನಮಗಿಂತ ಹೆಚ್ಚಾಗಿ ಅವರಿಗೆ ಗೊತ್ತು. ಇಸ್ರೇಲ್ ಒಂದು ಪುಟ್ಟ ಶಕ್ತಿಶಾಲಿ ಪ್ರಪಂಚ. ಪ್ರತಿಯೊಬ್ಬರಿಗೂ ಅಲ್ಲಿ ಮಿಲಿಟರೀ ಟ್ರೈನಿಂಗ್ಕಡ್ಡಾಯವಂತೆ. ಇಷ್ಟು ವರ್ಷ ಸೇವೆ ಸಲ್ಲಿಸಿದ ಬಳಿಕ ಅವರ ಮಾನಸಿಕ ಸಮತೋಲನ ಕಾಪಾಡಿಕೊಳ್ಳಲು ಭಾರತ ಪ್ರವಾಸ ಮಾಡಲೇಬೇಕು ಎಂಬುದು ನಿಯಮವಂತೆ. ಅವರು ಮಾತನಾಡುವ ಶೈಲಿಯಲ್ಲಿಅವರ ಸರಳ ನಡುವಳಿಕೆ ಕಾಣಿಸುತ್ತಿತ್ತು. ಕೇಳಿದಷ್ಟು ಪ್ರಶ್ನೆಗಳಿಗೆ ಉತ್ತರ. ಮರು ಪ್ರಶ್ನೆಗಳಿರಲಿಲ್ಲ. ಅಷ್ಟರಲ್ಲಿ ವಸಿಮ್ ಖಾವಾ ದೊಂದಿಗೆ ಬ್ರೆಡ್ ಆಮ್ಲೆಟ್ ತಂದಿಟ್ಟ.

img_1609

ಎಲ್ಲೋ ಯಾರೋ ಹೇಳಿದ್ದು ನೆನಪಾಯಿತು. ಈ ಇಸ್ರೇಲಿಗಳು ಮಾನಸಿಕ ನೆಮ್ಮದಿಗೆ ನಮ್ಮ ಹಿಮಾಚಲದ ಸ್ಪಿತಿ, ಖಾಜ಼ಾ ಎಂಬ ಪ್ರದೇಶದಲ್ಲಿ ಬಂದು ಕ್ಯಾಂಪ್ ಮಾಡುತ್ತಾರಂತೆ. ಇಲ್ಲಿ ವಿಶೇಷವಾಗಿ ದೊರೆಯುವ ಮಾದಕ ವಸ್ತುಗಳಿಗೆ ಮನಸೋತು, ಎಲ್ಲವನ್ನೂ ಮರೆತು ಇಲ್ಲಿಯೇ ಸನ್ಯಾಸಿಗಳಾಗಿ  , ತಿರುಗಿ ಹೋಗುವುದೇ ಇಲ್ಲವಂತೆ.

ಪೆಟ್ರೋಲ್ ಬಂಕ್ ಇನ್ನೂ 20 ಮೈಲಿ ದೂರವಿತ್ತು. ಘಂಟೆ 5. ನಾವು ಸ್ವಲ್ಪ ಹೊತ್ತು ಅಲ್ಲೇ ಕಳೆದು ಪೆಟ್ರೋಲ್ ಬಂಕ್ ಹುಡುಕುತ್ತಾ ಹೊರಟೆವು. ಕೊನೆಗೂ ಒಂದು ಪೆಟ್ರೋಲ್ ಬಂಕ್ ದೊರೆಯಿತು. ಪೆಟ್ರೋಲ್ಬೆಲೆಯೇರಿಕೆ ಆದಾಗ ನಮ್ಮ ಬೆಂಗಳೂರಿನ ಪೆಟ್ರೋಲ್ ಬಂಕ್ ಗಳಲ್ಲಿ ಕ್ಯೂ ನಿಲ್ಲುವಂತೆ ಇಲ್ಲೂ ಕೂಡ ದೊಡ್ಡದೊಂದು ಲೈನ್ ಇತ್ತು. ಸೀ ಆರ್ ಪೀ ಎಫ್ ಸಿಬ್ಬಂದಿಗಳು ನಿರಂತರ ಅರ್ಧ ಘಂಟೆ ಪ್ರಯತ್ನದನಂತರ ಮಲಗಿದ್ದ ಕೆಲಸದವರನ್ನು ಎಬ್ಬಿಸಿದರು. ಕೊನೆಗೂ ಬಿಕೆ ಟ್ಯಾಂಕ್ ಫುಲ್ ಮಾಡಿಸಿಕೊಂಡು ಪೋಲೀಸ್ ರೊಂದಿಗೆ ಫೋಟೋ ತೆಗೆಸಿಕೊಂಡು ಅಲ್ಲಿಂದ ಹೊರಟೆವು. ಅವರ ಮಾತುಗಳು ನಮ್ಮ ವೀರೂಸೆಹ್ವಾಗ್ ರ ಟ್ವಿಟ್ ಗಳಂತೆ ಹಾಸ್ಯಾಸ್ಪದವಾಗಿರುತ್ತವೆ. ಏನೋ ಒಂದು ಲಾಜಿಕ್ ಹೇಳಿ ಕೆಲಸದಲ್ಲಿರುವ ಹುಡುಗಿ ಮತ್ತು ಮನೆಯಲ್ಲೇ ಇರುವ ಹುಡುಗಿಯರಲ್ಲಿ ಯಾರು ಮದುವೆಯಾಗಲು ಸೂಕ್ತ ಎಂಬವಿಡಂಬನೆಯನ್ನು ವಿವರಿಸಿ, ಧ್ವಜ ತೆಗೆಯಲು ಹೇಳಿದವರಿಗೆ ಅವರ ಭಾಷೆಯಲ್ಲಿ ಬೈದು ನಮಗೆ ವಿದಾಯ ಹೇಳಿದ್ದು ನನ್ನ ನಗುವಿನಲ್ಲಿ ಮತ್ತೆ ಮತ್ತೆ ನೆನಪಾಗುತ್ತಿತ್ತು.

ಅದು ನ್ಯಾಶನಲ್ ಹೈವೇ 1. ಲೇಹ್ ಬಗ್ಗೆ ಮೊದಲ ಬಾರಿ ಕೇಳಿದಾಗಳಿಂದ ಅದೊಂದು ಕನಸು. ಕಾಣುವ ಕನಸುಗಳೆಲ್ಲ ನನಸಾದರೆ ಕನಸಿಗೆ ಬೆಲೆಯಲ್ಲಿ? ಎಂದು ಯಾರೋ ಕೇಳಿದ ಮಾತು ಸುಳ್ಳು ಎನಿಸಿತು. ನೋಡುನೋಡುತ್ತಿದ್ದಂತೆ ಗುಡ್ಡಗಳನ್ನು ದಾಟಿ ಸೋನ್ ಮಾರ್ಗ್ ತಲುಪಿದ್ದೆವು. ದಾರಿಯುದ್ದಕ್ಕೂ ಹಸಿರು ಮತ್ತು ಮಣ್ಣಿನ ಅಲಂಕಾರ. ದೂರದಲ್ಲಿ ಕಾಣುತ್ತಿದ್ದ ಹಿಮ ಸೋನ್‌ಮಾರ್ಗ್.

 

ಮೊದಲ ಬಾರಿ ಹಿಮನೋಡಿದ ಅನುಭವ. ಮುಟ್ಟಿ ಆಟವಾಡುವ ಆಸೆ ಒಂದು ಕಡೆಯಾದರೆ ಮೈಯಲ್ಲಿ ಚಳಿಗೆ ನಡುಕ. ಗೂಡಂಗಡಿಯಲ್ಲಿ ಚಹಾ ಕುಡಿದು ಮ್ಯಾಗಿ ಆರ್ಡರ್ ಮಾಡಿದಾಗ ಮೈಯೆಲ್ಲ ತರ ತರ ನಡುಗಿ ರಕ್ತ ಹೆಪ್ಪುಗಟ್ಟಿದಅನುಭವ. ಮೆಕ್ಕೆಜೋಳ ಮಾರುವ ಅಂಗಡಿಯವ ಹಾಕಿದ ಬೆಂಕಿಯ ಮುಂದೆ ಚಳಿ ಕಾಯಿಸಲು ಕುಳಿತಾಗ ಅದೇನೋ ಸುಖ. ಮಳೆ ಶುರುವಾಗಿತ್ತು. ಅಲ್ಲಿಂದ ಹೊರಟಾಗ ಮೊದಲು ಸಿಕ್ಕಿದ್ದು ಜ಼ೋಜ಼ಿಲ್ಲಾ ಪಾಸ್.

ಆಫ್ ರೋಡಿಂಗ್ ನಾ ಮೊದಲ ಉದಾಹರಣೆ. ಕೆಟ್ಟುಹೋದ ರಸ್ತೆಯಲ್ಲಿ ತಿರುವು ಮುರುವು. ಅದನ್ನು ದಾಟಿ ಹೊರಟಾಗ ಕಾರ್ಗಿಲ್ ಇನ್ನೂ 90 ಕಿಮಿ ದೂರವಿತ್ತು. ರಸ್ತೆಯ ಇಕ್ಕೆಲಗಳಲ್ಲಿ ಆಳ. ಮಧ್ಯದಲ್ಲಿಸುಂದರವಾಗಿ ಮಲಗಿರುವ ಕಪ್ಪು ರಸ್ತೆಯಲ್ಲಿ ಕನಸಿನ ಪಯಣ. ದೂರದಲ್ಲಿ ಕಾಣಿಸುವ ಅಮರನಾಥ್ ಯಾತ್ರಿಗಳ ಕ್ಯಾಂಪ್ ಗಳು. ಅಲ್ಲಲ್ಲಿ ಬೈಕ್ ನಿಲ್ಲಿಸಿ ರಸ್ತೆ ಬದಿಯಿರುವ ಹಿಮದೊಂದಿಗೆ ಆಟವಾಡಿ ದ್ರಾಸ್ತಲುಪಿದೆವು.

img_1630

ದ್ರಾಸ್ 1999 ಕಾರ್ಗಿಲ್ ಯುದ್ದದಲ್ಲಿ ಪಾಕಿಸ್ತಾನಿಗಳಿಂದ ಆಕ್ರಮಿತಗೊಂಡು ಯುದ್ದಾಂತ್ಯದಲ್ಲಿ ಮತ್ತೆ ಭಾರತದ ಪಾಲಾದ ಇತಿಹಾಸ ಹೊಂದಿದೆ. ನಮ್ಮ ದೇಶದಲ್ಲೇ ಅತಿ ಕಾಡಿವೆ ತಾಪಮಾನ ದಾಖಲಾದಪ್ರದೇಶ. ಗೇಟ್ ವೇ ಆಫ್ ಲಡಾಖ್ ಎಂದು ಕರೆಸಿಕೊಳ್ಳುವ ದ್ರಾಸ್ ಇಲ್ಲಿಯತನಕ ಕನಿಷ್ಟ ತಾಪಮಾನ -46 ಕಂಡಿದೆಯಂತೆ. ದ್ರಾಸ್ ನಿಂದ ಕಾರ್ಗಿಲ್ ವರೆಗಿನ ರಸ್ತೆಯುದ್ದಕ್ಕೂ ಅಕ್ಕಪಕ್ಕದ ಗುಡ್ಡಗಳಲ್ಲಿಕೊರೆದು ಬರೆದ ಪ್ರದೇಶದ ಹೆಸರುಗಳು ಕಾರ್ಗಿಲ್ ಯುದ್ದ ಕಂಡು ರಕ್ತ ಅಭಿಷೇಕ ಮಾಡಿಸಿಕೊಂಡ ಯುದ್ದಭೂಮಿಗಳಾಗಿದ್ದವು.. ನೇರವಾಗಿ ಹೋಗಿ ತಲುಪಿದ್ದು ಕಾರ್ಗಿಲ್ ಯುದ್ದ ಸ್ಮಾರಕ. ದೊಡ್ಡದಾಗಿಮ್ಯೂಸೀಯಮ್ ನಂತೆ ಸ್ಥಾಪಿಸಲಾದ ಆ ಸ್ಮಾರಕದಲ್ಲಿ ಯುದ್ದದಲ್ಲಿ ಮಡಿದು ದೇಶ ಸೇವೆ ಸಲ್ಲಿಸಿದ ಹಲವಾರು ಸೈನಿಕರ ಸಮಾಧಿಗಳನ್ನು ಶಿಸ್ತುಬದ್ದವಾಗಿ ಸ್ಥಾಪಿಸಲಾಗಿತ್ತು. ಒಳಗಡೆ ಥಿಯೇಟರ್ ನಲ್ಲಿ ಯುದ್ದದಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಗುತ್ತಿತ್ತು. ಮೇಜರ್ ವಿಕ್ರಮ್ ಬಾತ್ರಾ ನ ಬಗ್ಗೆ ಇನ್ನೊಮ್ಮೆ ಕೇಳಿ ತಿಳಿದು ಹೆಮ್ಮೆ ಎನಿಸಿತು. ಹೊರಗಡೆ ಪ್ರದರ್ಶನಕ್ಕೆ ಇಟ್ಟ ಬಜೂಕಾ ಡಾ ಮೇಲೆ “ರವೀನಾ ಟಂಡನ್ ನಿಂದನವಾಜ಼್ ಷರೀಫ್ ಗೆ ” ಎಂದು ಬರೆದಿತ್ತು. ಸ್ವಲ್ಪ ಹೊತ್ತು ಅಲ್ಲೇ ಕಳೆದು, ಯುದ್ದದ ಬಗ್ಗೆ ಎಲ್ಲವನ್ನೂ ಕೇಳಿ ತಿಳಿದು ಅಲ್ಲಿನ ಕಾರ್ಗಿಲ್ ಊರಿನತ್ತ ಹೊರಟಾಗ ಘಂಟೆ 2 ಆಗಿತ್ತು.

img_1562

ಶ್ರೀನಗರದಲ್ಲಿ 2  ದಿನ ಹೆಚ್ಚು ಕಳೆದಿರುವುದರಿಂದ, ಇಂದು ಕಾರ್ಗಿಲ್ ನಲ್ಲಿ ಉಳಿದುಕೊಳ್ಳುವ ಬದಲು ಲೇಹ್ ಗೆ ಹೊರಟುಬಿಡೋಣ ಎಂದು ಆಕಾಶ್ ಹೇಳಿದ. ಹೊಟ್ಟೆ ಹಸಿಯುತ್ತಿತ್ತು. ಪಕ್ಕದಲ್ಲಿರುವ ಮೈಲಿಗಲ್ಲುಲೇಹ್ 210ಕೇಯೆಮ್ ಎಂದು ತೋರಿಸುತ್ತಿತ್ತು.

(ಮುಂದುವರೆಯುವುದು)

Leave a Reply

Your email address will not be published. Required fields are marked *