Home / ಭಾವನೆಗಳ ಬಾಗಿಲು ತೆರೆದು / ಇನ್ನೊಂದು ಮುತ್ತಿನ ಕಥೆ.. :)

ಇನ್ನೊಂದು ಮುತ್ತಿನ ಕಥೆ.. :)

10402762_704419466312061_3478670332763227829_nಕಪ್ಪೆಚಿಪ್ಪು ಮರಳಿಗೆ ಮುಖ ಮಾಡಿ ಮಲಗಿತ್ತು. ನಿನ್ನೊಳಗೆ ಸ್ವಾತಿಮುತ್ತಿದೆ…!! ಯಾರೋ ಹೇಳಿದ ನೆನಪು. ಮುತ್ತಿಲ್ಲ, ಮಣಿಯಿಲ್ಲ. ತನ್ನ ಅರ್ಧ ಭಾಗವಿಲ್ಲ. ಏನೋ ಅಮಲು…ಬೇಸರ…ನೀರಡಿಕೆ. ದೂರದಲ್ಲಿರುವ ಅಲೆಗಳು ಹತ್ತಿರ ಬರುವ ವ್ಯರ್ಥ ಪ್ರಯತ್ನ ಮಾಡುತ್ತಿವೆ. ಏನೋ ಹುಡುಕುವ ಹಂಬಲ…ಅಲೆಗೊ-ತನಗೋ ಅಂತ ತನಗೆ ಪ್ರಶ್ನೆ ಹಾಕಿಕೊಂಡ ಚಿಪ್ಪು, ಕಣ್ಣಿನ ರೆಪ್ಪೆಯಲಿ ಸಾಗರದ ದೂರ ಅಳೆಯುತ್ತಿದೆ. ಸುಸ್ತಾಗಿದೆ..ಎದ್ದೇಳಲು ಆಗುತ್ತಿಲ್ಲ..
ಹಾಗೆ ಮಲಗಿ ತಾನು ಕಳೆದ ಕ್ಷಣಗಳ, ಹಳೆಯ ನೆನಪುಗಳ ಮೆಲಕು ಹಾಕುತ್ತಿದೆ.
ನೀರಿನ ಆಳ,ಮೀನುಗಳ ಸ್ನೇಹ,ಕಡಲ ಹೂ, ಬೆಳಕಿನ ಕಣ್ಣಾ-ಮುಚ್ಚಾಲೆ ಆಟ,ಅಲೆಗಳ ಪ್ರಣಯ.. “ತನ್ನಲ್ಲಿ ಸ್ವಾತಿಮುತ್ತಿದೆ..!!”ಅನ್ನೋ ಅಹಂನಿಂದಾಗಿ ಬೇರೆ ಚಿಪ್ಪುಗಳೊಂದಿಗೆ ಆಡಿದ ಜಗಳ. ಅದರ ಜೀವನವೇ ಒಂದು ಧ್ಯಾನ. ಕಣ್ಣು ಒದ್ದೆಯಾಗಿತ್ತು.
ಕಣ್ಣೀರಿನ ಶಾಖಕ್ಕೆ ಮರಳು ಮಾತಾಡಿತ್ತು.”ಗೆಳೆಯಾ ನಿನ್ನ ಮನಸನ್ನು ಅರಿತಿರುವೆ. ಈ ಕಣ್ಣೀರು ಯಾತಕ್ಕಾಗಿ? ಕಳೆದುಕೊಂಡ ಅರ್ಧ ಭಾಗಕ್ಕಾಗಿ? ಇಲ್ಲ… ಕಳೆದು ಹೋದ ಮುತ್ತಿಗಾಗಿ?”…. ಉತ್ತರ ತೋಚದೆ ಕಪ್ಪೆ ಚಿಪ್ಪು ಕಣ್ಣು ಮುಚ್ಚಿತ್ತು. ಒಂಟಿ ಮರಳು ಯಾವುದೋ ಅನಾಮಿಕ ಸ್ನೇಹಿತನ ಮರಣಕ್ಕೆ ಕಣ್ಣೀರು ಹಾಕಿತ್ತು.

ಕೇವಲ ನೆನಪುಗಳು ಶಾಶ್ವತ ಅಲ್ವಾ…??
#CreateMemories-ಆ ನೆನಪುಗಳು ಹೊಸ ಬದುಕು ಕೊಡುತ್ತವೆ

Leave a Reply

Your email address will not be published. Required fields are marked *