ಸೈಕಲ್ ಶಾಪ್ ರೀಚ್ ಆಗೋ ಅಷ್ಟರಲ್ಲಿ ಇಬ್ಬರೂ ಪೂರ್ತಿ ನೆನೆದು ಹೋಗಿದ್ದೆವು. ಆ 5 ನಿಮಿಷದ ದಾರಿ ಅರ್ಧ ಘಂಟೆಯ ಮೀರಿತ್ತು. ಮಳೆಯ ಜೊತೆ ತುಂಟತನ, ಜಗಳ, ಕೆಸರಿನ ಎರಚಾಟ ಎಲ್ಲ ಇತ್ತು ಆ ದಾರಿಲಿ..ಅಣ್ಣಾ ತಂಗಿಯ ಸಂಬಂಧ ಇನ್ನೂ ಗಟ್ಟಿಯಾಗಿತ್ತು.
ಅವಳು ಮಾಯೆ…!!. ನನ್ನ ಜೊತೆಯಾಗಿ ಹುಟ್ಟಿ ಬೆಳೆದರೂ ಈ ತರ ತಂಗಿ ಸಿಗುತ್ತಿರಲಿಲ್ಲ ಅನಿಸುತ್ತದೆ.
ಪಂಚರ್ ಅಂಗಡಿ ಮಂಜ….ಅಂಗಡಿಯನ್ನು ಅನಾಥವಾಗಿ ಬಿಟ್ಟು ಹೋಗಿದ್ದ. ಸುರಿಯೋ ಮಳೇಲಿ ಪಕ್ಕದ ಚಹಾ ಅಂಗಡಿಯಲ್ಲಿ ಬೀಡಿ ಜೊತೆ ಬಿಸಿ ಚಹಾ ಹೀರುತ್ತಿದ್ದ ಇಬ್ಬರು ಇಳಿವಯಸ್ಸಿನ ಯುವಕರು(ರಾಹುಲ್ ಗಾಂಧಿ age ಇರಬಹುದು), ಖುಷಿಯನ್ನ ಗುರುತಿಸಿ ನನ್ನನ್ನಾ ಒಂದು ಹಳ್ಳಿ ಲುಕ್ ಅಲ್ಲಿ ನೋಡಿದರು.
ಸರ್… ಪಂಚರ್ ಅಂಗಡಿಯವರು ಯಾರು ಇಲ್ವಾ?… ಕೇಳಿದೆ.
“ಮಂಜ..ಮನೆಲಿ ಪಂಚರ್ ಹಾಕ್ತವ್ನೆ…. ಮೊನ್-ಮೊನ್ನೆ ಮದ್ವೆ ಆಗವ್ನೆ…!!” ಅಂತ ಒಬ್ಬರನ್ನೊಬ್ಬರು ನೋಡಿ ನಕ್ಕರು.
ಹೋಗ್ಲಿ ಬಿಡಿ… ಬರೋ ವರೆಗೂ ಇಲ್ಲೇ ಕಾಯೋಣ ಬಾರೆ ಕೂಸೆ.. ಅಂತ ನಾನು ಖುಷಿ ಪಂಚರ್ ಅಂಗಡಿ ಪಕ್ಕ ಇದ್ದ ಬೀಟೆ ಮರದ ಬೆಂಚ್ ಮೇಲೆ ಕುಳಿತುಕೊಂಡೆವು….
ಖುಷಿಯ ಹೆಸರನ್ನ ನಾನು ಕೂಸೇ ಮಾಡಿದ್ದೆ… ಅವಳು ನನ್ನ ಸನ್ಯಾಸಿ ಮಾಡಿದ್ಲು.
ಏಕವಚನದಲ್ಲಿ ಒಬ್ಬರನ್ನೊಬ್ಬರು ಮಾತಾಡಿಸಬೇಕು… ಇದು ದಾರಿಯಲಿ ನಡೆದ ಹಲವು ಡೀಲ್ ಗಳಲ್ಲಿ ಒಂದಾಗಿತ್ತು.
ಸನ್ಯಾಸಿ…. !!! ಅಂತ ಹೇಳಿ ಮತ್ತೆ ನಕ್ಕಳು….
ಹಾಗೋ ಹೀಗೊ…ಮಳೆಯ ಮಂದ ಬೆಳಕಲ್ಲಿ, ಮಂಜನ ಕಾಯೋ ಹೊತ್ತಲ್ಲಿ ಆ ಇಬ್ಬರ ಪರಿಚಯ ಆಗೋಗಿತ್ತು. ನಂಜಪ್ಪ ಮತ್ತು ಶಿವಲಿಂಗು. ಇಬ್ಬರೂ ಸುಮಾರು ದಶಕಗಳ ಹಿಂದೆ ಕಾಫೀ ತೋಟದ ಕೆಲಸಕ್ಕೆ ಉತ್ತರ ಕರ್ನಾಟಕದ ಕಡೆಯಿಂದ ಬಂದು, ಮಲೆನಾಡಿನ ಸೊಬಗಿಗೆ, ಹುಡುಗಿಯರಿಗೆ ಮರುಳಾಗಿ ಸದ್ಯಕ್ಕೆ ಇಲ್ಲೆ ತಮ್ಮ ಬಾವುಟ ಹಾರಿಸಿದವರು.
ಓ ನೀವು ನಾಯಕರ ಮಗಾ ನಾ?? ಅಂತ ಅವರ ಎರಡನೆಯ ನಂತರದ ಪ್ರಶ್ನೆಗೆ ನನ್ನ ಪ್ರತಿಪ್ರಶ್ನೆ ಅದೇ ಆಗಿತ್ತು…
“ಈ ದಿವಂಗತ ಅಂದ್ರೆ ಯಾರು ಗೊತ್ತಾ ಸ್ವಾಮಿ ನಿಮಗೆ???”….
ಅವರು..ಅದಕ್ಕೆ “ತುಂಬಾ ಕೇಳಿದೀವಿ…ಅವರು ಇಲ್ಲೆ ಪಕ್ಕದ ಊರ ಹಿರಿಯರು….” ಅಂತ ಹೇಳಿದ ಮಾತಿಗೆ…ಖುಷಿ,”ನಂಗೊತ್ತು….!! “.. ಅಂದಳು.
ಅಯ್ಯೋ..!! ಕೈಯಲ್ಲೇ ಬೆಣ್ಣೆ ಇಟ್ಕೊಂಡು..ಊರೆಲ್ಲಾ.. ಅನ್ನೋ ತರ…ಅಂತ ಖುಷಿ ನಾ ನೋಡಿ ಖುಷಿ ಆಯ್ತು…
ಆ ವಿಷಯದ ಕುರಿತು ಇರುವ ಆತುರವನ್ನು ಬದಿಗಿಟ್ಟು, ಆಮೇಲೆ ಖುಷಿ ಜೊತೆ ಡೀಟೇಲ್ ಆಗಿ ಮಾತಾಡೋಣ ಅಂತ ನಿರ್ಧರಿಸಿ..ವಿಷಯ ಮರೆಸಿದೆ.
ಕೋಳಿ ಆಂಟಿ ಮಾಡಿರೋ ಟೀ ಗೆ ಸಕ್ಕರೆಯ ಕೊರತೆಯಿತ್ತು.
ಹಾಂ..!! ಆ ಟೀ ಅಂಗಡಿ ನಡೆಸುತ್ತಿರುವ ಮಾಲೀಕ ಪುರುಷೋತ್ತಮ…ಮುಂಚೆ ಧರ್ಮ ಸಿಂಗ್ ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ಸಾರಾಯಿ ವ್ಯಾಪಾರ ಮಾಡುತ್ತಿದ್ದ. ನಂತರ ಊರ ಮಹಿಳಾ ಸಂಘಟನೆಯ ಒತ್ತಾಯಕ್ಕೆ ಮಣಿದು ಅದನ್ನು ನಿಲ್ಲಿಸಿ..
“ಮೂಡಿಗೆರೆಯನ್ನು ಸಾರಾಯಿ ಮುಕ್ತ ಊರು ಮಾಡೋಣ” ಅಂತ ಬ್ಯಾನರ್ ಹಿಡಿದು ಧರಣಿಗೆ ಬಂದಿದ್ದ ವಿಧವೆಯ ಮೇಲೆ ಲವ್ ಆಗಿ ಮದುವೆ ಮಾಡಿಕೊಂಡ ಅಂತೆ. 😛
ಅಲ್ಲಿಗೆ ಸಾರಾಯಿ ವ್ಯಾಪಾರ ಕೊನೆಯಾಗಿ ಒಂದು ಕೋಳಿ ಫಾರ್ಮ್ ಜೊತೆಗೆ ಒಂದು ಟೀ ಅಂಗಡಿಯನ್ನ ನಡೆಸುತ್ತಿದ್ದಾನೆ. ಪಕ್ಕದ ಖಾಲಿ ರೂಮ್ ಅನ್ನು ಅವನ ಸೋದರಳಿಯ ಮಂಜ ನಿಗೆ ಪಂಚರ್ ಅಂಗಡಿ ನಡೆಸಲು ಕೊಟ್ಟಿದ್ದಾನೆ. ಆ ಆಂಟಿ ಟೀ ಅಂಗಡಿ ನೋಡಿಕೊಳ್ಳುತ್ತಾರೆ. ಇನ್ನೂ ಮಕ್ಕಳಾಗಿಲ್ಲ. ಎಲ್ಲರೂ ಅವರನ್ನ ಪ್ರೀತಿಯಿಂದ ಕೋಳಿ ಆಂಟಿ… ಕೋಳಿ ಆಂಟಿ.. ಅಂತಾನೆ ಕರೆಯೋದು.
ಇವೆಲ್ಲವನ್ನೂ ನಂಜಪ್ಪ ಒಂದೇ ಉಸಿರಲ್ಲಿ, ಪಿಸುಮಾತಲ್ಲಿ ಹೇಳಿ ಮುಗಿಸಿದ್ದ…
ಆ ಇಬ್ಬರಿಗೂ ಆ ಆಂಟಿ ಯ ನಿಜವಾದ ಹೆಸರು ಗೊತ್ತಿರಲಿಲ್ಲ. ನನಗೂ ಕೇಳಬೇಕು ಅನಿಸಲಿಲ್ಲ.
ಕೋಳಿ ಆಂಟಿ..!! ಹಾಹಾ.. ಮುದವಗಿತ್ತು.
ಖುಷಿಗೆ ಈ ಯಾವ ವಿಷಯಗಳಲ್ಲೂ interest ಇಲ್ಲ ಅನ್ನೋ ತರ ಮಳೆ ಹನಿಗಳನ್ನ ಎಣಿಸುತ್ತಾ ಮಂಜನ ಹಾದಿ ಕಾಯುತ್ತಾ ಕುಳಿತಿದ್ದಳು..
ಮಳೆ ಸ್ವಲ್ಪ ಕಡಿಮೆ ಆಗಿತ್ತು. ಮಂಜ ಕೊನೆಗೂ ಬಂದ…
“ಶಮಿಸಿ..ಬುದ್ದಿ… ಸಾನೆ ಲೇಟ್ ಅಯ್ಥಲ್ರ…ಹಾಳಾದ್ದು ಮಳೆ!! ಛತ್ರಿ ತಗಂಡು ಹೊಯ್ನಿರ್ನಿಲ್ಲಾ….”
ಅಯ್ಯೋ ಹೋಗ್ಲಿ ಬಿಡಿ ಮಂಜಣ್ಣ…ಇವೆಲ್ಲ ಏನಕ್ಕೆ?? ಪರ್ವಾಗಿಲ್ಲ.. ಅಂತ ಹೇಳಿದೆ.
“ಏನು ಆಗಬೇಕು ಬುದ್ದಿ?”…ಅಂತ ಅವನು ಕೇಳಿದಾಗ…ಖುಷಿ ನನ್ನ ಮುಖ ನೋಡಿದಳು.
ನಾವು ಸೈಕಲ್ ಟಯರ್ಗೆ ಗಾಳಿ ತುಂಬಿಸಬೇಕಿತ್ತು… ಪಂಪ್ ಅಲ್ಲೇ ಇತ್ತು.. ನಮಗೆ ಮಂಜನ ಅವಶ್ಯಕತೆ ಇರಲಿಲ್ಲ…. ಅದು ನಮ್ಮಿಬ್ಬರಿಗೆ ಆಮೇಲೆ flash ಆಗಿತ್ತು.
ಟೈಮ್ ಅಂತೂ ವೇಸ್ಟ್ ಆಗಿಲ್ಲಾ…ಹೊಸ ವಿಷಯಗಳು ಸಿಕ್ಕಿದ್ದವು…ಜೊತೆಗೆ ನಮ್ಮ ತುಂಟ ಜಗಳಕ್ಕೆ ಇನ್ನೊಂದು ಸಬ್ಜೆಕ್ಟ್ ಸಿಕ್ಕಿತ್ತು. ಯಾಕೋ ಹೊಟ್ಟೆ ಹಸೀತಿದೆ ಅನಿಸಿತು. ನಾನು ಖುಷಿ ನಮ್ಮ ಮನೆಯ ಕಡೆ ಹೊರಟೆವು….. ನಮಗೆ ನಗಲು ಕಾರಣಗಳು ಬೇಕಿರಲಿಲ್ಲ. ದಾರಿಯುದ್ದಕ್ಕೂ ಮತ್ತೆ ಜಗಳ…ನೀನು? ನಾನು? ಲೇಟ್ ಮಾಡ್ಸಿದ್ದು ಅಂತ….
ಕೊನೆಗೂ ನಮ್ಮ ಮಾತು ದಿವಂಗತ ರ ವಿಷಯಕ್ಕೆ ಬಂದಿತ್ತು.
“ಲೇ ಕೂಸೇ… ಹೇಳು ಇವಾಗ ಯಾರು ಅದು ದಿವಂಗತ?”
ಖುಷಿ ನಮ್ಮ ಮನೆಯ ಗೇಟ್ ತೆಗೆದಳು….
(ಮುಂದುವರೆಯುವುದು…..)

3 Comments
ಕಥೆಯೊಳಗಿನ ಅನೇಕ ಉಪಕಥೆಗಳು ಸ್ವಾರಸ್ಯಕರವಾಗಿತ್ತು.
ಆದರೇ ಬಹಳ ಸಂಕ್ಷಿಪ್ತ ಎನಿಸಿತು. Overall, it’s an interesting piece of work:-).
VJ good one…..very interesting……narration too good…thumps up dude!!!
Thanks 🙂