ಬೆರಗಾಗಿವೆ ಭಾವಗೀತೆಗಳು ಪದಗಳ ಹುಡುಕಾಟಕ್ಕೆ,
ಅಪ್ಪಳಿಸುವ ತೆರೆಯಲಿ ಚಂದಿರ ಆಡೋ ಆಟಕ್ಕೆ.
ಹೆಜ್ಜೆಗಳ ನೆರಳಾಗೋ ಆಸೆ,ಹೂಂ.. ಎಂದು ಕತ್ತಲಲಿ ನಡೆಯದಿರು..
ಮಾಯೆಯಾಗದಿರು,ಆ ಗೀತೆಗಳ ಭಾವ ನೀನು,ಅರ್ಥ ನೀನು.
ನೀನಿರುವ ಭೂಗೋಲದಲ್ಲಿ ಬರೀ ನಕ್ಷತ್ರಗಳ ಪರಿಮಳ.
ಮನದ ಮಿಡಿವ ತಂತಿಯ ಸ್ವರಗಳಲಿ, ಚಿಟ್ಟೆಗಳ ಕಲರವ.
ಕಾಗುಣಿತದ ಕಲೆಯೂ ಉಳಿಸದೆ,ಅಳಿಸಿ ಹೊರಟೆಯಾ ?
ಒಮ್ಮೆ ಹಿಂತಿರುಗಿ ನೋಡಲು ಕಾರಣವ ಕೇಳದಿರು ನೀನು.
ತಿಂಗಳ ಬೆಳಕಲಿ ತುತ್ತಿಟ್ಟ ಕೈ ಚಂದ,ಮುತ್ತಿಟ್ಟೆ ಮನಸಿಂದ.
ಆ ಬಳೆಗಳ ನಾದಕೆ ಕಂಡಿದ್ದೆಲ್ಲ ಮಕರಂದ.
ನನ್ನ ಕೈಸನ್ನೆ ಕಾಣದಾ? ಎದೆಬಡಿತ ಕೇಳದಾ?
ಕಣ್ಣು ಮಂಜಾಗಿದೆ ರೆಪ್ಪೆಗಳ ಭಾರಕ್ಕೆ, ಎಲ್ಲೂ ಇಲ್ಲ ನೀನು.
ನಾ ನಿನ್ನ ನೆರಳಾಗಿ,ನೀ ಅದರ ಉಸಿರಾಗಿ,
ನಡೆಯುವ ಕನಸಿನ ದಾರಿಯಲಿ ಬರೀ ಮಾತಿನ ಒರೆತ.
ನಿನ್ನ ಕಣ್ಣಿನ ಕನ್ನಡಿಯಲಿ ನನ್ನ ಇನ್ನೊಮ್ಮೆ ನೋಡುವಾಸೆ.
ಒಂದ್ ಸಾರಿ ಬಂದು ಮಾತಾಡಿಸು ನೀನು.


2 Comments
Photo devaddaa?
http://navakarnataka.blogspot.com
Good one!!