ತುಟಿಯ ತುದಿಯಲ್ಲಿ ಮರೆಯಾದ ಮಾತುಗಳು, ತೀರದಲಿ….ಅಲೆಯೇ ಬಂದು ಅಳಿಸಿ ಹೋಗು ಎಂದು ಬರೆದ ಹೆಜ್ಜೆ ಗುರುತುಗಳ ಜೊತೆಗೆ ನಮ್ಮ ಹೆಸರುಗಳು, ನಿನ್ನ ಕೈ ಬೆರಳಿನಲಿ ಎಣಿಸಿದ ಮುತ್ತುಗಳ ಲೆಕ್ಕದಲಿ ಮಿಸ್ ಆದ ಕೆಲವುಗಳು, ಜಗಳದ ನಶೆಯಲ್ಲಿ ನಿನ್ನ ಕಣ್ಣೀರಿನ ಪರದೆಯಿಂದಾಗಿ ಕಾಣದೆ ಮಿಸ್ ಆದ missed call ಗಳು, ನಿದ್ರೆ ಇರದ ರಾತ್ರಿಯಲಿ ಕಂಡ ಹಗಲುಗನಸುಗಳು, ಮೊದಲ ಬೇಟಿಯಲಿ ನೋಡಿಯೂ ನೋಡದಂತೆ ನಟಿಸಿದ ಕಣ್ಣ ನೋಟಗಳು…ಮೊದಲ ಪತ್ರದಲಿ ಗೀಟು ಹೊಡೆದ ತಪ್ಪುಗಳು….ಇನ್ನೂ ಏನೇನೋ….ನಿನ್ನ ನೋಡಲು ಕಾಯುತ್ತಿವೆ ನನ್ನ ಜೊತೆ…. ಬೇಗ ಬಾ…….


