Home / ಭಾವನೆಗಳ ಬಾಗಿಲು ತೆರೆದು / ನೆನಪುಗಳಲ್ಲೂ ಸ್ವಾತಂತ್ರ್ಯವಿರಲಿಲ್ಲ……

ನೆನಪುಗಳಲ್ಲೂ ಸ್ವಾತಂತ್ರ್ಯವಿರಲಿಲ್ಲ……

Image

ಆಗಸ್ಟ್ 15….ಸ್ವಾತಂತ್ರ್ಯ ದಿನಾಚರಣೆ… ಆ ಧ್ವಜಾರೋಹಣ, ಆ ಮಕ್ಕಳ ಮೆರವಣಿಗೆ, ಆ ಜೈಕಾರ ಎಲ್ಲ ಆಫೀಸ್ ವಿಂಡೊ ಇಂದ ನೋಡುತ್ತಿದ್ದ ಹಾಗೆ ಅಮ್ಮನ call ಬಂತು….
“ವಿಶು…. ಧ್ವಜಾರೋಹಣ, ಭಾಷಣ ಎಲ್ಲ ಮುಗಸೆ ಎಗ್ ಮಾನಿಗ್ ಬಂದೆ…..”

ಅಂದಾಗ ಆ ಹಳೆಯ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ಬಾಲ್ಯದ ದಿನಗಳು ಕಣ್ಣ ಮುಂದೆ ಉಸಿರಾಡಿದಂತಿತ್ತು.

ಅಮ್ಮ ಬೆಳಿಗ್ಗೆ ಬೆಳಿಗ್ಗೆ ಎಬ್ಬಿಸುತ್ತಿದ್ದರು ಹಿಂದಿನ ದಿನ ರಾತ್ರಿ ಎಲ್ಲ ಕುಳಿತು ಗಟ್ಟು ಹೊಡೆದ ಆ “ಮಾನ್ಯ ಅಧ್ಯಕ್ಷರೇ ಪೂಜ್ಯ ಗುರುಗಳೇ….” ಮರೆತು ಹೋಗಿ, ನಿದ್ದೆಗಣ್ಣಲ್ಲೇ ಇನ್ನೊಮ್ಮೆ ಅದನ್ನ ಓದಿ, ಸ್ನಾನ ಮಾಡಿ(ಆ ಪಶ್ಚಿಮ ಘಟ್ಟದಲ್ಲಿ ಮಳೆ ಬರದ ಆಗಸ್ಟ್ 15 ಇಲ್ಲ ಅನಿಸುತ್ತದೆ), ಮಳೆ ನೋಡಿ, ಬಿಳಿಯ ಬಣ್ಣದ ಉಡುಗೆ ತೊಟ್ಟು. ಅಪ್ಪ ತಂದ ಬಾವುಟ, ಕೈಗೆ ತ್ರಿವರ್ಣ ರಿಬ್ಬನ್, ಜೈ ಹಿಂದ್ ಅಂತ ನನ್ನ ಕೈ ಮೇಲೆ ನಾನೇ ಹಾಕಿದ tattoo.. ಪ್ರತಿದಿನ ಅಮ್ಮನ ಜೊತೆ (ಅಮ್ಮ ನಮ್ಮ ಮೇಡಂ) ಹೋಗುತ್ತಿದ್ದ ನಾನು ಆ ದಿನ ಅಮ್ಮನಿಗಿಂತ ಮುಂಚೆ school ಗೆ ಹೋಗುತ್ತಿದ್ದೆ. ನಮ್ಮ ಅಮ್ಮನ order ನಂತೆ ಪ್ರತಿಯೊಬ್ಬರೂ school ಗೆ ಧ್ವಜಸ್ತಂಬದ ಅಲಂಕಾರಕ್ಕಾಗಿ minimum ಒಂದೊಂದು ಹೂವನ್ನು ತರಬೇಕು. ನಮ್ಮ ಪಕ್ಕದ ರಾಣೆ ಆಂಟೀ ಮನೆಯ ಹೂದೋಟದಿಂದ ಡೇರೆ ಹೂವು / ಗುಲಾಬಿ ಹೂವು ಕಿತ್ತುಕೊಂಡು, ಕೈಯಲ್ಲಿ ಅದೇ “ಮಾನ್ಯ ಅಧ್ಯಕ್ಷರೇ…” ಶಾಲೆಗೆ ನಮ್ಮ ಪಯಣ.

ಶಾಲೆಗೆ ಹೋಗಿ ನಾನೇ ಬೀಗ ತೆಗೆಯುತ್ತಿದ್ದೆ. ನಮ್ಮ ಹಳ್ಳಿ ಹುಡುಗರು ಕೋತಿ ರಾಮನ ತರ ಕಂಬ ಏರಿ ರಾಷ್ಟ್ರಧ್ವಜ ರೆಡೀ ಮಾಡುತ್ತಿದ್ದರು. ನಾವು ಧ್ವಜಸ್ತಂಬದ ಅಲಂಕಾರ… ಮಾವಿನ ತೋರಣ , ಹೂವುಗಳು, ಎಲ್ಲೆಲ್ಲೂ ಬಿಳಿ…ನಮ್ಮ ಶಾಲೆ ಮಧುಮಗಳಂತೆ ಮಿಂಚುತ್ತಿತ್ತು. ನಮ್ಮಮ್ಮ ಹಾಗೂ ಇತರೆ ಶಿಕ್ಷಕರು ಮದುವೆ ಊಟಕ್ಕೆ ಬರುವಂತೆ ಶ್ವೇತ ಸೀರೆಯಲ್ಲಿ ಆಗಮಿಸುತ್ತಿದ್ದರು. ನಂತರ ಇದ್ದಿದ್ದೇ ಅದೇ ರಾಗ ಅದೇ ಹಾಡು….

ಊರಿನ ಅಧ್ಯಕ್ಷರು ಬಂದು ಧ್ವಜಾರೋಹಣ , ರಾಷ್ಟ್ರಗೀತೆ, ನಾಡಗೀತೆ, ಒಂದೇ ಮಾತರಂ….ಎಲ್ಲ ಮುಗಿದ ಮೇಲೆ ಬೋಲೋ ಭಾರತ್ ಮಾತಾಕಿ…..ಅಂತ ಕೂಗಿದಾಗ ನಾವೆಲ್ಲರೂ…ಜೈ ಅನ್ನಬೇಕಿತ್ತು 🙂 ಎಲ್ಲ ವಿಧ್ಯಾರ್ಥಿ ಗಳಿಗೆ ಒಬ್ಬ ಲೀಡರ್ ಇರುತ್ತಿದ್ದ…ಮೊದಮೊದಲು ಯಾರದೋ ಕೂಗಿಗೆ ಜೈ ಹಾಕುತ್ತಿದ್ದ ನಾನು ಆಮೇಲೆ ಆ ಸ್ಥಾನವನ್ನ ಆಕ್ರಮಿಸಿದ್ದೆ 😛 .

ನಂತರ ಇಡೀ ಊರಿಗೆ ಮೆರವಣಿಗೆ. ಬೋಲೋ ಭಾರತ್ ಮಾತಾಕೀ…..ಜೈ ಮಹಾತ್ಮ ಗಾಂಧಿ ಜೀ ಕಿ…….ಜೈ ವಂದೇ……..ಮಾತರಂ ಜೈ ಜವಾನ…….ಜೈ ಕಿಸಾನ್ ಉದ್ದದ ಸಾಲುಗಳಲ್ಲಿ ನಮ್ಮ ಮೆರವಣಿಗೆ…ಗ್ರಾಮ ಪಂಚಾಯತ್, ಅರಣ್ಯ ಇಲಾಕೆ, high school, ಅಂಗನವಾಡಿ ಹೀಗೆ ಎಲ್ಲ ಕಡೆ ಧ್ವಜಾರೋಹಣ ಮುಗಿಸಿ…ಎಲ್ಲೆಡೆ ಕೊಡುತ್ತಿದ್ದ lacto king, ಮಹಾ lacto chocolate ಗಳನ್ನ ತಿಂದು ನಮ್ಮ ಮೆರವಣಿಗೆ ಮರಳಿ ನಮ್ಮ ಶಾಲೆಯ ಹಾಲ್ ಗೆ ಹೋಗುತ್ತಿತ್ತು. ಅಧ್ಯಕ್ಷರ ಭಾಷಣ ,ನಮ್ಮಮ್ಮ ಮಾಡೋ ಭಾಷಣ, ಎಲ್ಲ ಇತರೆ ಶಿಕ್ಷಕ ವೃಂದದ ಭಾಷಣ ಮುಗಿಯೋವಷ್ಟರಲ್ಲಿ ನಮ್ಮ incomplete ಆದ ನಿದ್ದೇ ಕಂಪ್ಲೀಟ್ ಆಗಿರುತ್ತಿತ್ತು almost. ನಂತರ ಭಾಷಣ ಸ್ಪರ್ಧೆ ಮಕ್ಕಳಿಗೆ… ಮುಂದಿನ ಭಾಷಣ “ವಿಶ್ವಜೀತ್ ನಾಯಕ್……” ಅಂತ ಹೇಳಿದಾಗ ನಿದ್ದೆ ಹೊರಟು ಹೋಗಿ ಒಂಥರಾ ನಡುಕ ಶುರು ಆಗೋದು. ಹಾಗೋ ಹೀಗೊ ಹೋಗಿ “ಮಾನ್ಯ ಅಧ್ಯಕ್ಷರೇ, ಪೂಜ್ಯ ಗುರುಗಳೇ, ಇಂದು ನಾವು 56 ನೇ 57 ನೇ …ಸಂಭ್ರಮ…ಗಾಂದಿಜಿ ಯವರು ಹೋರಾಡಿ ನಮ್ಮ ದೇಶಕ್ಕೆ ತಂದು ಕೊಟ್ಟರು…..” ಹೀಗೆ ಏನೇನೋ ಹೇಳಿ ಭಾಷಣ ಮುಗಿದಿರುತ್ತಿತ್ತು. ಕೊನೆಯಲ್ಲಿ ಜೈ ಹಿಂದ್ ಜೊತೆಗೆ… ನಾನೇ compose ಮಾಡಿರುತ್ತಿದ್ದ ಆ ಭಾಷಣ ದಲ್ಲಿ ಬರೀ ಗಾಂಧೀಜಿ ನೆಹರು ಇವರೇ ಇರುತ್ತಿದ್ದರು, ಇತರರ ಬಲಿದಾನದ ನೆರಳು ಇರುತ್ತಿರಲಿಲ್ಲ… ಆದರೂ ನನಗೆ ಬಹುಮಾನ ನಿಶ್ಚಿತವಾಗಿರುತ್ತಿತ್ತು . ನಂತರ ದೇಶ ಭಕ್ತಿಗೀತೆ ಸ್ಪರ್ದೆ…ನಾವು ಅದರಿಂದ ದೂರ…ಎಲ್ಲ ಮುಗಿದು ಬಹುಮಾನ ವಿತರಣೆ ನಂತರ ಬಹುಮಾನದ ಜೊತೆಗೆ ಹೆಚ್ಚು ಉಳಿದ ಎಲ್ಲ chocolate ಗಳು ನನ್ನ ಬ್ಯಾಗ್ ನಲ್ಲಿ ಇರುತ್ತಿತ್ತು. ಅದಾದ ಮೇಲೆ ನಮ್ಮ ಮುಂದಿನ ಪ್ರಯಾಣ surf excel hai naa???? ನೇರವಾಗಿ ಕ್ರಿಕೆಟ್ ಆಡಲು ಗ್ರೌಂಡ್ ಗೆ…..ನಾವು andrew flintoff ಆವಾಗ…ಆಟ ಮುಗಿಸಿ ಮನೆ ಸೇರೋಹೊತ್ತಿಗೆ ನಮ್ಮ ಬಿಳಿಯ ಬಣ್ಣದ uniform ನ 12 ದಿನ ಆಗಿರೋದು. ಬಹುಮಾನ ದ ಖುಷಿಯಲ್ಲಿ ಅಪ್ಪ ಅಮ್ಮ ಇಬ್ಬರೂ ನನಗೆ ಹೊಡೆಯುತ್ತಿರಲಿಲ್ಲ ಆ ದಿನ. ಊಟ ಮಾಡೋವಾಗ ಅದೇ ದೂರದರ್ಶನ ಚ್ಯಾನೆಲ್ ನಲ್ಲಿ ಪ್ರತಿ ಬಾರಿ “ROJA” ಮೂವೀ ಕ್ಲೈಮ್ಯಾಕ್ಸ್ ಇರೋದು…..ಆ ದಿನಗಳು ರಿಪೀಟ್ ಆಗ್ತೀವೆ ಅನಿಸುತ್ತಿತ್ತು.

ಮಾಡಿದ ಆ ಭಾಷಣಗಳನ್ನು ಇನ್ನೊಮ್ಮೆ ಯೋಚಿಸಿದರೆ ಬರೀ ದ್ವಂದ್ವಗಳು ಸ್ರಷ್ಟಿಯಾಗುತ್ತವೆ. ಅವರೇನೋ ಸ್ವಾತಂತ್ರ್ಯ ಕೊಡಿಸಿದವರು ಅನ್ನಿಸಿಕೊಂಡು ನೋಟುಗಳಲ್ಲಿ, ನೋಟ್‌ಬುಕ್ ಗಳಲ್ಲಿ, ರಾಜಬರಹಗಳಲ್ಲಿ, ಗ್ರಂಥಗಳಲ್ಲಿ, ದೊಡ್ಡ ದೊಡ್ಡ ಬಿಲ್ಡಿಂಗ್ ಗಳ ಹೆಸರುಗಳಲ್ಲಿ ಸೆಟ್ಲ್ ಆದರು. ಸ್ವಾತಂತ್ರ್ಯ ಫಲಾನುಭವಿಗಳು ನಾವೇನಾ? ಅಂತ ಮುಟ್ಟಿ ನೋಡಿಕೊಳ್ಳಬೇಕಾದ situation ಬಗ್ಗೆ ಯಾರು ಯೋಚಿಸಿರಲಿಕ್ಕಿಲ್ಲ. ಎಲ್ಲೆಲ್ಲೂ ಮೋಸ,ವಂಚನೆ, ಅಧಿಕಾರದ ದುರುಪಯೋಗ , ಭ್ರಷ್ಟಾಚಾರ, ಕಲಬೆರಕೆ, ಕೂಗು, ಆಕ್ರಂದನ, ಕಣ್ಣೇರು, ಬೆವರು,ಹಸಿವು, ದಣಿವು…ಹೀಗೆ ನೋಡುತ್ತಾ ಹೋದರೆ…ಬ್ರಿಟೀಷರ ಆಳ್ವಿಕೆಗಿಂತ ಇದು ಕೀಳು ಅಂತ ಅನಿಸದಿರದು. ಇದನ್ನು ನಮ್ಮ ಯುವ ಜನತೆ ಹಿರಿಯರ ಆಶೀರ್ವಾದದೊಂದಿಗೆ serious ಆಗಿ ತಗೊಂಡು ನಮ್ಮ ದೇಶ ಎರಡೆರಡು ಸ್ವಾತಂತ್ರ್ಯ ದಿನಾಚರಣೆ ಆಚರಿಸುವಂತಗಲಿ ಎಂದು ಆಶಿಸುತ್ತೇನೆ.
ಎಲ್ಲೋ ಓದಿದ ಒಂದು ಸಂದೇಶವಿದು……..:

ಬಡಜನರ ಹಸಿವಾಗಿರು
ದಲಿತರ ದಣಿವಾಗಿರು
ಪರೀಕ್ಷೆ ಬರೆದು ಸೋತವನ ಪ್ರಶ್ನೆಗಳಾಗಿರು.
ಯುದ್ದ ಸೋತವನ ರಕ್ತವಾಗಿರು.

ತನ್ನವರ ಕಳೆದುಕೊಂಡವರ ಕಣ್ಣೀರಾಗಿರು.
ಸಾಯಲು ಕಾರಣವಾಗಿರು,
ರೈತನ ನಷ್ಟವಾಗಿರು
ತಾಯಂದಿರ ಹೆರಿಗೆ ನೋವಾಗಿರು

ನೀ ಮಾಯೆಯಾಗಿರು
ಇದು ನನ್ನ ದೇಶ, ನನ್ನ ಜನ,
ನನ್ನ ನಾಡು,ನನ್ನ ರಾಜ್ಯಬಾರ
ನೀ ನನಗೆ ಕಾಣದಿರು….
ನಿನ್ನ ನಾಶವೇ ನನ್ನ ಗುರಿ…

ಈ ತರ ಪ್ರತಿ ದೇಶ ಪ್ರಜೆಯೂ ಯೋಚಿಸಲಿ….

ಜೈ ಹಿಂದ್…..

Tagged:

3 Comments

Leave a Reply

Your email address will not be published. Required fields are marked *