Home / ಕಥೆಗಳು / ಅಂತರ್‌ದೇಶಿ (ಭಾಗ 4)

ಅಂತರ್‌ದೇಶಿ (ಭಾಗ 4)

ಖುಷಿ…..!! ನೋಡಲು ನಾನು ಟೀ ಹಿಡಿದುಕೊಂಡೇ ಹೊರಗಡೆ ಬಂದೆ.
ಮನೆ ಗೇಟ್ ಹೊರಗಡೆ ಸೈಕಲ್ ಬೆಲ್ ಮಾಡುತ್ತಾ
“ಅಮ್ಮಾ…!!! ಗೇಟ್ ತೆಗಿ…ಗೇಟ್ ತೆಗಿ ” ಅಂತ ಸೈಕಲ್ ಬೆಲ್ ಜೊತೆ ಕಿರುಚುತಿದ್ದಳು.
“ಇರಮ್ಮ ಒಂದು ನಿಮಿಷ….” ಅಂತ ಆಂಟೀ ಗೇಟ್ ತೆರೆಯಲು ಹೊರಟರು.
ನನ್ನ ನೋಡಿದ ಕೂಡಲೇ ಅದನ್ನೆಲ್ಲಾ ನಿಲ್ಲಿಸಿ, ಸೈಕಲ್ನಾ ಬಾಳೆಗಿಡಕ್ಕೆ ಚಾಚಿ ನಾಚಿಕೆಯಿಂದ ಒಳಗಡೆ ಬಂದಳು.
“ಹಾಯ್….!!!” ನಾನು ಬೇರೆ ಏನು ಮಾತಾಡಲಿಲ್ಲ.
ನಕ್ಕು ಒಳಗಡೆ ಹೋದಳು.
ಅವರಮ್ಮ ಒಳಗಡೆ ಹೋಗಿ ನನ್ನ introduction ಹೇಳುತ್ತಿರುವುದು ನನಗೆ ಕೇಳಿಸುತಿತ್ತು.
ಆಂಟೀ ಹೊರಗಡೆ ಬಂದು, “ಅವಳದು ಸ್ವಲ್ಪ ನಾಚಿಕೆ ಸ್ವಭಾವ. ಯಾರಾ ಹತ್ತಿರಾನೂ ಜಾಸ್ತಿ ಮಾತಾಡಲ್ಲ.” ಅಂತ ಹೇಳುತ್ತಾ ಅವಳನ್ನ ಇನ್ನೊಮ್ಮೆ “ಹೊರಗಡೆ ಬಾರೇ….” ಅಂತ ಕೂಗಿದರು.
ಪಿಸುಮಾತನ್ನು ಮುಚ್ಚುಇಡಲಾಗದ ಆ ಪುಟ್ಟ ಮನೆಯಲ್ಲಿ ಅಷ್ಟು ಜೋರಾಗಿ ಕೂಗಿ ಕರೆಯುವ ಆವಶ್ಯಕತೆ ಇರಲಿಲ್ಲ. ಅಂತ ನನಗೆ ಅನಿಸಿತು.
ಅವಳು ಹೊರಗಡೆ ಬಂದು “ಅಣ್ಣಾ…ನಾನು ಹಾಲು ತರಲು ಹೋಗಿದ್ದೆ. ಅಮ್ಮ ಹಾಲಿಲ್ಲದೇ ಟೀ ಕೊಟ್ಟಿದಾರೆ ಅಂತ ಬೇಜಾರು ಮಾಡ್ಕೋಬೇಡಿ. ನಾನು ಇನ್ನೊಮ್ಮೆ ಟೀ ಮಾಡಿ ಕೊಡುತ್ತೇನೆ..2 ನಿಮಿಷದಲ್ಲಿ…..”ಅಂತ ಒಳಗಡೆ ಹೋದಳು.
ಯಪ್ಪಾ….ಅವರಮ್ಮ ಹೇಳಿದ ಮಾತುಗಳಿಗೆ ತದ್ವಿರುದ್ದವಾಗಿದ್ದಳು.
ಖುಷಿ ಅನ್ನೋ ಹೆಸರು ಇವಳಿಂದಾನೆ ಶುರು ಆಗಿರಬೇಕು ಅನ್ನಿಸಿತು. ತುಂಬಾ ಮುದ್ದಾಗಿದ್ದಾಳೆ. ಸ್ಪಟಿಕದ ಕಣ್ಣುಗಳು.
ಆ ಕಣ್ಣಿನಲಿ ಹೊಳಪಿದೆ. ಅವರು ಬಡವರಾದರೂ ಶ್ರೀಮಂತಿಕೆ ಅವಳ ಮಾತಲ್ಲಿ ಎದ್ದು ರಾರಾಜಿಸುತಿತ್ತು. ಅಣ್ಣಾ….ಅನ್ನೋ ಪದದಲ್ಲಿ ಏನೋ ಮಾಯೆಯಿತ್ತು.
ಆ ಮಾತಿನಲ್ಲಿ ನನಗೆ ಕಥೆಗೆ ಮೀರಿದ ತಂಗಿ ಸಿಕ್ಕಿದ್ದಳು.
“ಟೀ ತಗೋಳಿ….” ಅಂತ ಹೇಳಿ ಟೀ ತಂದಿಟ್ಟಳು.
“ಅಣ್ಣಾ ನಿಮ್ಮ ಮನೆ ಹತ್ತಿರ ಹೋಗಿದ್ದೆ. ಆಂಟೀ ಹೇಳಿದ್ರು ನಿಮಗೆ ಮೂಡಿಗೆರೆ ತೋರಿಸಬೇಕು ಅಂತ.
ನಿಮ್ಮ ಬೆಂಗಲೂರು ತರ ಏನು ಇಲ್ಲ ಅಣ್ಣಾ ಇಲ್ಲಿ. ಬಾರಿ ಕಾಡು, ಗಿರಿ”….ಅಂತ ಬಿಡದೇ ಮುತ್ತು ಉದುರಿಸಿದಂತೆ ಮಾತಾಡುತಿದ್ದಳು.
ಅವಳ ಮಾತುಗಳು ಮಗುವಿನ ಮಾತುಗಳಂತೆ ಕೇಳಿಸುತ್ತಿತ್ತು.
ಳ ಉಚ್ಚಾರ ಬರುತ್ತಿರಲಿಲ್ಲ. ಅದಕ್ಕೆ ಲ ಅಂತಿದ್ದಳು.
ಬಹಲ,ಕಾಡುಗಲು,ಹಾವುಗಲು….ಅಂತ ಮಾತಾಡುತ್ತಿದ್ದರೆ ಖುಷಿಯಾಗುತ್ತಿತ್ತು.
“ಖುಷಿ…..!!!! ನನಗೆ ಕಾಡುಗಲು, ಪ್ರಾಣಿಗಲು ಎಲ್ಲ ಅಂದರೆ ಪ್ರಾಣ…..” ಅಂದೆ…
ಅವಳಿಗೆ ನಾನು ಅವಳನ್ನ imitate ಮಾಡ್ತಿದೀನಿ ಅಂತ ಗೊತ್ತಾಯಿತು. ತಲೆ ಕೆಳಗೆ ಮಾಡಿ ನಗುತ್ತಿದ್ದಳು.
“ನೀನೇನಕ್ಕೆ ಳ ಗೆ ಲ…ಲ… ಅಂತೀಯಾ????” ಅಂದೆ….
“ಗೊತ್ತಿಲ್ಲ ಅಣ್ಣಾ….ಎಷ್ಟೇ ಪ್ರಯತ್ನ ಮಾಡಿದರೂ ಬರ್ತಾ ಇಲ್ಲ ಅದು….”
ನಿನಗೆ ನಾನು ಅದನ್ನ ಕಳಿಸುತ್ತೇನೆ… don’t worry ಅಂದೆ….
“ಹೂಂ ಸರಿ…” ಅಂತ ತಲೆ ಆಡಿಸಿದಳು.
ಮಳೆ ನಿಂತಿತ್ತು…
ಹೊರಡೋಣವಾ??? ಅಂತ ಕೇಳಿದೆ….
ಹೂಂ..ಸರಿ..ಸೈಕಲ್ ನೀವೇ ಓಡಿಸಬೇಕು …. ಅಂತ order ಬೇರೆ…
ಸರಿ ಆಂಟೀ ನಾವು ಹೋಗಿ ಬರುತ್ತೇವೆ…ಅಂತ ಆಂಟೀ ಗೆ ಹೇಳಿ ಹೊರಟೆವು….
“ಅಣ್ಣಾ!!! ಇದು ನಮ್ಮ ಸ್ಕೂಲ್ ನಲ್ಲಿ 8th std ಹುಡಗಿಯರಿಗೆ ಕೊಟ್ಟ ಸೈಕಲ್….
ಹಿಂದಿನ ಗಾಲಿ ಗೆ ಗಾಳಿ ಕಡಿಮೆ ಇದೆ….ಸೈಕಲ್ ಶಾಪ್ ವರೆಗೆ ನಡೆದುಕೊಂಡು ಹೋಗಣಾ… ” ಅಂದ್ಲು…
ಆ ಸೈಕಲ್ ಗೆ ಯಡಿಯೂರಪ್ಪ ಫೋಟೋ ಕೆಳ್ಗಡೆ… “ಮುಖ್ಯಮಂತ್ರಿಗಳ ಆಶೀರ್ವಾದ ” ಅಂತ ಬರೆದಿತ್ತು….
“ಖುಷಿ…..ಏನದು ಆಶೀರ್ವಾದ ಗೀಷಿರ್ವಾದ ಅಂತ ಎಲ್ಲ ಬರ್ದಿದೆ….??” ಅಂದೆ….
“ನಾನೇ ಬರೆಸಿದ್ದು ಅಣ್ಣಾ….!! ಯಡಿಯೂರಪ್ಪ ತುಂಬಾ ಒಲ್ಲೆಯವರು…ಅವರು ಇಲ್ಲ ಅಂದ್ರೆ ನನಗೆ ಸೈಕಲ್ ಸಿಕ್ತಿರ್ಲಿಲ್ಲ…”
ನನಗೆ ನಗು ಬಂತು…ಅವಳ ಮುಗ್ದದೆ ಸಾಗರದ ಆಳದಂತಿತ್ತು…..
ನಮ್ಮ ರಂಗೋಲಿ ಹುಡುಗಿ ಅವರ ಮನೆ ಬಾಗಿಲಲ್ಲಿ ನಿಂತು ನಮ್ಮ ಕಡೆಗೆ ನೋಡುತ್ತಿದ್ದಳು.
“ಅವಳು ನನ್ನ ಸ್ನೇಹಿತೆ…. ದಿವ್ಯ ಅಂತ”..
ನಾನು ಕೇಳಿರಲಿಲ್ಲ…ಅವಳೇಕೆ ಹೇಳಿದಳು ಅಂತ ನನಗೆ ಗೊತ್ತಾಗಲಿಲ್ಲ.
ಇಬ್ಬರು ಸೈಕಲ್ನಾ ತಳ್ಳಿಕೊಂಡು ಸೈಕಲ್ ಶಾಪ್ ಕಡೆ ಹೊರಟೆವು.
ಮಳೆ ಮತ್ತೆ ಶುರುವಾಗಿತ್ತು……
(ಮುಂದುವರೆಯುವುದು…..)

 

5 Comments

Leave a Reply

Your email address will not be published. Required fields are marked *