ಉಸಿರೇ ನಿಂತಿರುವಂತಿದೆ, ಕಣ್ಣುಗಳು ಸವೆದಿವೆ ನಿದ್ದೆಯ ಕಾಣದೆ
ನಿನ್ನ ನೆನಪುಗಳೇಕೆ ಇಷ್ಟು ಭಾರ????
ನಿನ್ನೊಡನೆ ಕಳೆದ ಪ್ರತಿ ಕ್ಷಣವೂ ಹಸಿರಾಗಿದೆ.
ನೀ ಹಿಂತಿರುಗಿ ನೋಡದಿರು, ನಾ ನೆನಪುಗಳ ಸಾಲ ಕೊಡೆನು.
ನೀ ನಡೆದ ದಾರಿಯ ದೂಳೆಲ್ಲ ಸೇರಿ ಮರುಭೂಮಿಯಾಗಿದೆ
ನೀ ನಿಂತ ನೆರಳು ಹುಡುಕುತಿರುವೆ ನಾನು,
ಭೂಮಿ ಗೋಳವಾಗಿದೆ ಎಂದು ಖುಷಿಯಾಗಿರುವೆ ನಾನು,
ದೂರ ದೂರಗಳು ಸೇರಿ ಬರುವ ಉತ್ತರವೇ ಹತ್ತಿರ.
ನೀ ನಡೆದ ದೂರ ಅಳೆಯಲು ಗಣಿತ ಸಾಲದಾಗಿದೆ
ಗುರಿಯಿದ್ದು ಇರದ ಈ ಪಯಣ ಬಾರಿ ಗೋನದಲಗಳ ಗೂಡು,
ಕಾಲದ ವೇಗದಲ್ಲಿ ಚಲಿಸಿ, ನಿನಗೆ ಹತ್ತಿರವಾಗಲಾ???
ಇಲ್ಲ…!!!!
ನೀ ಮತ್ತೆ ಬರುವವರೆಗೂ ಇಲ್ಲೇ ಕಾಯುತಿರಲಾ…???
ಭೂಮಿ ಗೋಳವಾಗಿದೆ ಎಂದು ಖುಷಿಯಾಗಿರುವೆ ನಾನು,
ದೂರ ದೂರಗಳು ಸೇರಿ ಬರುವ ಉತ್ತರವೇ ಹತ್ತಿರ.
ಉತ್ತರವ ಬಯಸುತಿದೆ ಮನಸ್ಸು………

