Home / ಭಾವನೆಗಳ ಬಾಗಿಲು ತೆರೆದು / ಅಲೆಮಾರಿಗಳ ಜಗತ್ತಿನಲ್ಲಿ ಅಪರಿಚಿತರು ಯಾರು ? ಭಾಗ -18

ಅಲೆಮಾರಿಗಳ ಜಗತ್ತಿನಲ್ಲಿ ಅಪರಿಚಿತರು ಯಾರು ? ಭಾಗ -18

ನೀಲಾಕಾಶಮ್ ಪಚ್ಚ ಕಡಲ್ ….. ಮುಂದೆ ಹೇಳುವ ಅವಶ್ಯಕತೆಯಿಲ್ಲ. ಹಾ ಅದೇ ಮೂವಿ. ನನ್ನಂತೆ ಸಾವಿರಾರು ಜನರಿಗೆ ಲಿಮಿಟ್ ಇಂದ ಮೀರಿದ ಡೆಸ್ಟಿನೇಷನ್ ನೀಡಿ ಒಂದು ಅಪರೂಪದ ಅನುಭವದ ಜರ್ನಿ ಮಾಡಲು ಪ್ರೇರೇಪಿಸಿದಂತಹ ಚಲನಚಿತ್ರ.

ಅದರಲ್ಲಿ ಒಂದು ಸನ್ನಿವೇಶವಿದೆ – ನಮ್ಮ ಹೀರೋ ಹುಡುಗಿಗೆ ಕೇಳ್ತಾನೆ ” which is the most beautiful place you have seen ? “

ಅವಳು ಒಂದು ಕ್ಷಣ ಯೋಚಿಸದೆ – ಅವನ ಪ್ರಶ್ನೆ ಮುಗಿದು ಪ್ರಶ್ನಾರ್ಥಕ ಹಾಕುವ ಮುನ್ನವೇ – ಹೇಳಿದ ಉತ್ತರ

ತವಾಂಗ್ ….!!

ಹೌದು ನಮ್ಮ ಮುಂದಿನ ಪಯಣ ತವಾಂಗ್ ಗೆ . ಅದು ನನ್ನ ಹುಡುಗಿಯ ಜೊತೆಯಲ್ಲಿ. ಕಳೆದ ಬಾರಿಯಂತೆ  ಕನ್ಯಾಕುಮಾರಿಯಿಂದ ಶುರು ಮಾಡುವ ಸಾಹಸ ಮಾಡುತ್ತಿಲ್ಲ. ಏನಿದ್ದರೂ ಇದು ಬೆಂಗಳೂರಿನಿಂದ ತವಾಂಗ್.

ಎಷ್ಟೋ ದಿನಗಳಿಂದ ಬರೆಯಬೇಕು ಎಂದಿದ್ದ ಈ ಕೊರತೆ ಗೆ ಇಂದು ಕಾಲ ಕೂಡಿ ಬಂದಿದೆ. ಸರಿ ಸುಮಾರು ಏಳು ವರ್ಷಗಳ ನಂತರ – ಮರೆಯುವ ಹವ್ಯಾಸವಿರುವ ನನಗೆ ಆ ಜರ್ನಿ ನೆನಪಿನಲ್ಲಿಡುವುದು ಕಷ್ಟವೇ… ಮಾಡಿದ ಟಿಪ್ಪಣಿ ಸ್ವಲ್ಪ ನೆರವಾದರೆ ಉಳಿದ ಹಲವು ನಿಜವೋ ಸುಳ್ಳೋ , ಕನಸೋ ಅಥವಾ ನಡೆದ ಘಟನೆಯೋ ಎಂಬ ದ್ವಂಧ್ವ ಮೂಡುವುದು ಸಹಜ ನನ್ನಂತಹ ಇಮ್ಯಾಜಿನೇಶನ್ನಲ್ಲಿ ಕಾಲ ಕಳೆಯುವ ಜನರಿಗೆ.

“ನೀನು ಶುರು ಮಾಡು. ವಿಶಾಖಪಟ್ಟಣದ ವರೆಗೆ ಬಾ.. ಮುಂದಿನದು ನಾನು ಬರೆಯುತ್ತೇನೆ ” ಎಂದು ನನ್ನ ಬೈಕಿನ ಹಿಂಬದಿ ಸವಾರತಿ ? ( ಹೊಸ ಸೇರ್ಪಡೆ ಕನ್ನಡ ನಿಗಂಟಿಗೆ ? ಜೈ ಕಿಟೆಲ್ ) ಹೇಳಿದಾಗ ಏನೋ ಒಂದು ಸಮಾಧಾನ.

ಈ  ಸಾಫ್ಟ್ವೇರ್ ಎಂಜಿನಿಯರ್ ಗಳು ಒಂದು ಲಾಂಗ್ ಟರ್ಮ್ ಗೋಲ್  ಅಂತ ಎಲ್ಲರೂ ಇಟ್ಟುಕೊಂಡಿರುತ್ತಾರೆ. ಕೆಲವರು ಬುದ್ದಿವಂತರು ಏನೋ ಸಕ್ಸಸ್ ಅದು ಇದು ಅಂತ ಒಂದು ಮಾರ್ಗದಿ ನಡೆದರೆ, ಬಾಣಲೆಯಿಂದ ಹಾರಿ ಬೆಂಕಿಗೆ ಬಿತ್ತು  ಎಂಬುವಂತೆ ಯಾಕೆ ನಾನು ಎಂಜಿನಿಯರ್ ಆದೆ ? ಇಲ್ಲಿ ಏನುಮಾಡುತ್ತಿದ್ದೀನಿ ? ಈ ಕಂಪನಿಯಿಂದ ನನಗಾಗುತ್ತಿರುವ ಉಪಯೋಗವಾದರೂ ಏನು ? ಎಂದು ಯೋಚಿಸುವ ನನ್ನಂತವರು ದೇವರು ತೋರಿದ ಮಾರ್ಗ ಎಂದು ಆದಷ್ಟು ನಡೆದು – ಅವಾಗವಾಗ ಚಹಾ ಅಂಗಡಿ , ಹೋಟೆಲ್ , ಸ್ವಂತ ವ್ಯವಹಾರ ಅಂತ ಕನಸು ಕಾಣುತ್ತ -(ಇದು ಶಾರ್ಟ್ ಟರ್ಮ್ ಗೋಲ್ಸ್ ) ಒಂದು ಲಾಂಗ್ ಟರ್ಮ್ ಗೋಲ್ ಇಟ್ಟುಕೊಂಡಿರುತ್ತಾರೆ – ಅದೇ ಈ ಹುದ್ದೆಯಿಂದ ಆದಷ್ಟು ಬೇಗ ನಿವೃತ್ತಿಯಾಗಬೇಕು ಎಂದು 🙂 ಎಂಟು ವರ್ಷದ ಸುದೀರ್ಘ ಸೇವೆಯ ನಂತರ ಇವಾಗ ಸಾಕಪ್ಪ – ಹೊಟ್ಟೆ ಪಾಡಿಗೆ 2 ವರ್ಷಗಳ ಸಾಹಸದಿಂದ ಬೆಳೆಸಿದ ನಮ್ಮ “ಹ್ಯಾಷ್ ಇಟಿನೇರರಿ” ಟ್ರಾವೆಲ್ ಕಂಪನಿ ಇದೆ ಎಂಬ ಬಂಡ ಭರವಸೆಯಿಂದ ನನ್ನ ಹುಡುಗಿಯ ಜೊತೆ ಚರ್ಚಿಸಿ ಫೆಬ್ 2019 ರಲ್ಲಿ ಪೇಪರ್ ಹಾಕಿದಾಗ (resignation) ಜಗತ್ತಿನಲ್ಲಿ ನನ್ನಷ್ಟು ಖುಷಿಯಾಗಿರುವ ವ್ಯಕ್ತಿ ಬೇರೆ ಯಾರಿಲ್ಲ ಅನಿಸಿತು.

ಇನ್ಮೇಲೆ ಯಾರಿಗೂ ರಿಪೋರ್ಟ್ ಮಾಡುವ ಅವಶ್ಯಕತೆಯಿಲ್ಲ. ಬೈಕ್ ರೈಡ್ ಹೋಗಬೇಕು ರಜೆ ಬೇಕು ಎಂದು ಯಾವುದೇ ಮ್ಯಾನೇಜರ್ ಗೆ ಕೇಳುವ ಜಂಜಾಟವಿಲ್ಲ. ದಿನಗಳ ಹಂಗಿಲ್ಲ, ಬೈಕ್ ಇದೆ – ಪೆಟ್ರೋಲ್ ಇದೆ – ಗೊತ್ತಿರುವ – ಗೊತ್ತಿರದ ಎಷ್ಟೋ ರಸ್ತೆಗಳಿವೆ ಅನಂತದ ವರೆಗೂ ….

ಅದೇ ದಿನ ರಾತ್ರಿ ಹ್ಯಾಷ್ ಇಟಿನೇರರಿ ಇಂದ ಒಂದು ಗ್ರೂಪ್ ಬೈಕ್ ರೈಡ್ ಪ್ಲಾನ್ ಮಾಡಿದೆ . ಗುವಾಹಟಿ – ತವಾಂಗ್. ಸುಮಾರು ೧೦ ದಿನಗಳ ಪಯಣ. ಅದೇ ತರಹ ನಾನು ಬೆಂಗಳೂರಿನಿಂದ ಶುರು ಮಾಡಿ – ಎಲ್ಲರೂ ಗುವಾಹಟಿ ತಲುಪುವ ದಿನ ನಾನು ಹೋಗಿ ಅಲ್ಲಿ ಸೇರುವಂತೆ ನೀಲನಕ್ಷೆ ಸಿದ್ದವಾಯಿತು. ನನ್ನ ಹುಡುಗಿ ಸಹ ರಜೆ ಹಾಕಿ ನನ್ನೊಂದಿಗೆ ಬರುವ ಉತ್ಸಾಹ ಇನ್ನೊಂದೆಡೆ .

ಎಲ್ಲ ಪ್ಲಾನ್ ಮಾಡಿ ಮಲಗಿದೆ .. ನಿದ್ದೆ ಬರಲಿಲ್ಲ ಮತ್ತದೇ ಪ್ರಶ್ನೆ… ” which is the most beautiful place you have seen ? “

ಹಳೆಯ ವಾಟ್ಸಪ್ಪ್ ಸ್ಟೇಟಸ್ ಅನ್ನು ಮತ್ತೆ ರಿಸೆಟ್ ಮಾಡಿದೆ. (ಮುಂದುವರೆಯುವುದು…)

Tagged:

Leave a Reply

Your email address will not be published. Required fields are marked *