ಅವರ ಹೆಸರು “ದಿವಂಗತ” ಅಂತ…ಹೌದು ದಿವಂಗತ……!!!!
…..ಏನಿದು ವಿದಿವಶರಾದವರಿಗೆ ಗೌರವ ಪೂರ್ವಕವಾಗಿ ಕರೆಯುವ ಹೆಸರಿನ ಪೂರ್ವ ಪದ ಇವರಿಗೆ ಹೆಸರಾ???
ನಾನು ದೆವ್ವ ಭೂತದ ಜೊತೆ ಮಾತಾಡ್ತಿದಿನಾ???? ಒಮ್ಮೆ ನನ್ನ ನಾನೇ ಮುಟ್ಟಿ ನೋಡಿಕೊಂಡೆ.
ಅಜ್ಜಾ!!!! ತಮಾಷೆ ಮಾಡಬೇಡಿ….ನಿಜ ಹೇಳಿ ಏನು ನಿಮ್ಮ ಹೆಸರು??
ಅದೇ ಕಣಪ್ಪಾ…!! ದಿವಂಗತ ಅಂತ ನನ್ನ ಹೆಸರು. ಒಂದು ಮುಗುಳ್ನಗೆ….
ಕಾಫೀ ಕುಡಿದು ಹೊರಟಾಗ ಸಮಯ ಸಂಜೆ 5:30…
ಮಳೆ ಕಡಿಮೆಯಾಗಿದೆ. ಅಜ್ಜಾ ಎಲ್ಲಿರೋದು ನಿಮ್ಮ ಮನೆ? ಬಲೂನುಗಳು ನಿಮ್ಮ ಮೊಮ್ಮಕ್ಕಳಿಗಾ???ಏನಕ್ಕೆ ಒಬ್ಬಬ್ಬರೇ ಓಡಾಡ್ತೀರಾ??? ನನ್ನ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಲಿಲ್ಲ.
ಅವರು ವಾಸವಾಗಿರುವುದು “ಶಾಂತಿಧಾಮ” ಎಂಬ ವ್ರದ್ದಾಶ್ರಮ, ಇಲ್ಲೇ ಮೂಡಿಗೆರೆಯ ಹೊರವಲಯದಲ್ಲಿರುವುದು ಅಂತ ಗೊತ್ತಾಯಿತು.
ಬನ್ನಿ ಅಜ್ಜಾ ಅಲ್ಲಿಯವರೆಗೂ ಡ್ರಾಪ್ ಮಾಡ್ತೀನಿ ಅಂದೆ….
ಬೇಡಪ್ಪ ನಡಕೊಂಡು ಹೋಗ್ತೀನಿ. ವ್ಯಾಯಾಮ ಆಗತ್ತೆ ಅಂತ ನಡೆದು ಹೊರಟರು.
.ಏನೋ ಹೊಸ ಕಥೆ ಬರೀಬೇಕು ಅಂತಿದ್ದ ನನಗೆ ಒಂದು ಕ್ಯಾರಕ್ಟರ್ ಸಿಕ್ಕಿತ್ತು….ಏನೋ ಸಿಕ್ಕಾಪಟ್ಟೆ interesting ಅನಿಸಿತು.
ಅಜ್ಜಾ..ಅದೇ ಬಲೂನುಗಳ ಹಿಡಿದು ಹೊರಟರು. ಹೊರಡುವ ಮುನ್ನ ಮತ್ತೆ ಅದೇ ಮುಗುಳ್ನಗೆಯ ಆಶೀರ್ವಾದ.
ಅಜ್ಜಾ ನಿಮ್ಮನ್ನು ಆದಷ್ಟು ಬೇಗ ಮತ್ತೆ ಬೇಟಿಯಾಗುತ್ತೇನೆ ಅಂತ ಮನಸ್ಸಲ್ಲೇ ಹೇಳಿಕೊಂಡು ಮನೆಯ ಕಡೆ ಹೊರಟೆ…..
ರಾತ್ರಿ ಇಡೀ ನಿದ್ದೆಯಿಲ್ಲ ಕಣ್ಣು ಮುಚ್ಚಿದರೆ, ತೆರೆದರೆ ಒಂದೇ ನೆನಪು…ದಿವಂಗತ.
ಬಲೂನುಗಳು ಪ್ರಶ್ನೆಗಳಾಗಿದ್ದವು.
ಮೂಡಿಗೆರೆ ಚಿಕ್ಕಮಗಳೂರಿನ ಒಂದು ಊರು. ಸಹ್ಯಾದ್ರಿಯ ತೊಪ್ಪಲಲಿ ಹಸಿರನು ಹಾಸಿ ಹೊದ್ದು ನಿಂತಿರುವ ಸ್ವರ್ಗ.
ನಮ್ಮ ತಂದೆಯವರಿಗೆ ಕಳೆದ ತಿಂಗಳು ಇಲ್ಲಿಗೆ ವರ್ಗಾವಣೆಯಾಗಿದೆ. ನನ್ನ ಮೂಡಿಗೆರೆಯ ಮೊದಲ ಬೇಟಿಯಲ್ಲೇ ಈ ತರಹದ ಅನುಭವ…its just amazing!!!!
ಉರಲ್ಲಿ ಗುರುತು ಪರಿಚಯ ಏನು ಇಲ್ಲ. ಮನೆ ಕೆಲಸದ ಕೃಷ್ಣಪ್ಪ,ದಿವಂಗತ ಬಿಟ್ಟರೆ ಎಲ್ಲರೂ ಅಪರಿಚಿತರೇ ನನಗೆ….
“ಶಾಂತಿಧಾಮ” ಏನದು??? ಅದರ ಇತಿಹಾಸವೇನು? ನನ್ನಲೇ ಕಾಲ್ಪನಿಕ ಕಥೆ ಹುಟ್ಟಲು ಶುರುವಾಯಿತು.
ಇದಕ್ಕೆ ಕೃಷ್ಣಪ್ಪನ ಸಹಕಾರ ಬೇಕು ಅಂತ ಅಪ್ಪನ ರೂಮಿಗೆ ಹೋಗಿ
ಅಪ್ಪ…!!! ಕೃಷ್ಣಪ್ಪನ ಹತ್ರ ನಾಳೆ ಮೂಡಿಗೆರೆ ಊರು ತೋರಿಸೋಕೆ ಹೇಳ್ತೀರಾ????
ಮಳೆ ಕಣೋ…ಮಳೆ ನಿಂತ್ರೆ ಹೋಗಿ ಬನ್ನಿ. ಅಂದ್ರು…
ಅಡಿಗೆ ಮನೆಯಲ್ಲಿ ಪಾತ್ರೆ ತೊಳೆಯುತ್ತಿದ್ದ ಅಮ್ಮ…”ಲೋ ಋಷಿ ….ಇನ್ನ ಮಲಗಿಲ್ವ ನೀನು?? ಬೆಂಗಳೂರಿಗೆ ಯಾವಾಗ್ ಹೋಗ್ತೀನಿ ಅಂದೇ???” ಅಂತ ಕೇಳಿದ್ರು.
ನಾಳೆ ಭಾನುವಾರ ರಾತ್ರಿ ಹೊರಡಬೇಕಿದ್ದ ನಾನು ,
“ಗೊತ್ತಿಲ್ಲ ಅಮ್ಮ…..ಸ್ವಲ್ಪ ದಿನ ಇಲ್ಲೆ ಇರ್ತೀನಿ” ಅಂತ ಹೇಳಿ ಅಟ್ಟದ ಮೇಲಿನ ನನ್ನ ರೂಮಿಗೆ ಹೊರಟೆ.
ನಾನು ನಿರ್ಧರಿಸಿದ್ದೆ…”ದಿವಂಗತರ ಬಗ್ಗೆ research ಮಾಡದೆ ನಾನು ಬೆಂಗಳೂರಿಗೆ ಹೋಗಲ್ಲ ಅಂತ.”
ನಮ್ಮ ಮ್ಯಾನೇಜರ್ ಗೆ ಫೋನ್ ಮಾಡಿ ನಾಳೆ ರಜೆಯನ್ನ ಮುಂದುವರೆಸ ಬೇಕು ..
ನಾಳೆ ಮಳೆ ಬರದಿರ್ಲಪ್ಪ…ಅಂತ ಪ್ರಾರ್ಥನೆ ಮಾಡಿ ನಿದ್ರೆಗೆ ಜಾರಿದೆ.
ಇದೇನು ವಿಪರ್ಯಾಸ???? ಮತ್ತೆ ಕನಸಲ್ಲೂ ಅದೇ ಬಲೂನುಗಳು……..ಎಲ್ಲ ಕಪ್ಪು ಎರಡು ಮಾತ್ರ ನೀಲಿ…
(ಮುಂದುವರೆಯುವುದು………….)

4 Comments
Macha superagide, yaro professionalse bardhagide, plz continue writing….waiting for baga 3….
@darshan thanks maga….sure.will publish it soon….
barli barli……chanagide maga … bahala kutuhala mudisuvantha kathe
Character name sakathagide….continue madu Vishu..!!