Home / ಕಥೆಗಳು / ಅಂತರ್‌ದೇಶಿ…. (ಭಾಗ-3)

ಅಂತರ್‌ದೇಶಿ…. (ಭಾಗ-3)

ಸೂರ್ಯೋದಯ ಹೇಗಿರುತ್ತೇ ಅಂತ ಮರೆತು ಎಷ್ಟೋ ದಿನವಾಗಿದ್ದ ನನಗೆ ಆ ದಿನ ಯಾವುದೋ ಕೋಳಿ ಕೂಗು ಕೇಳಿ ಮುಂಜಾನೆ 5:30 ಕ್ಕೆ ಎಚ್ಚರವಾಗಿತ್ತು. ಮೊಬೈಲ್ನಲ್ಲಿ ಟೈಮ್ ನೋಡಿ ಮತ್ತೆ ಮಲಗಲು ರೆಡೀ ಆದಾಗ ಮತ್ತೆ ಬಲೂನುಗಳು ನೆನಪಾಗಿ ಎದ್ದು ಕುಳಿತೆ.
ಅಮ್ಮ ಹೆಂಚಿನ ಮೇಲೆ ಹಾಕುತ್ತಿದ್ದ ದೋಸೆ ಅದರ ವಾಸನೆಯಿಂದಲೇ ಗೊತ್ತಾಗಿ ಕಣ್ಣು ಒರೆಸುತ್ತಾ ಅಟ್ಟವ ಇಳಿದು ಸೀದಾ ಅಡಿಗೆ ಮನೆಗೆ ಹೊರಟೆ.
“ಹೋಗಿ ಮೊದಲು ಬ್ರಶ್ ಮಾಡಿ ಬಾ…!!!” ಅಮ್ಮ ಗದರಿದರು.
“ಹುಲಿ ಸಿಂಹ ಎಲ್ಲ ಬ್ರಶ್ ಮಾಡುತ್ತವಾ?????” ಎಂದಾಗ ತಲೆ ಮೇಲೆ ಒಂದು ಏಟು…ಎಂದಿನಂತೆ….
ಅಮ್ಮ ಬ್ರಶ್ ಅಂದಾಗ ನಗು ಬಂತು….
ಏನಾಯ್ತು ಅಂದ್ರೆ……ನಾನು ಮನೆಗೆ ಬಂದ ಮೊದಲ ದಿನ…ಬೆಳಿಗ್ಗೆ ಎದ್ದು…ಹೋಗಿ ಹೋಗಿ
 “ಅಮ್ಮ ಕಡ್ಡಿಪೊಟ್ಟಣ ಕೊಡಿ…..”ಅಂದು ಬಿಟ್ಟಿದ್ದೆ.
ಬೆಂಗಳೂರಿನಲ್ಲಿ ಸ್ನೇಹಿತರೊಂದಿಗೆ ಬಾಡಿಗೆ ಮನೆಯಲ್ಲಿರೋ ನನಗೆ ಬೆಳ್ಬೆಳಿಗ್ಗೆ ಟೀ ಜೊತೆ ದಂ ಹೊಡಿಯೋ ಅಭ್ಯಾಸ ಆಗಿ ಹೋಗಿತ್ತು…..
ಆಮೇಲೆ ಏನೋ ಜ್ಞಾನೋದಯವಾದಂತಾಗಿ “ಬ್ರಶ್ ಬ್ರಶ್….!!!” ಅಂದಿದ್ದೆ.
ಪಾಪ ಅಮ್ಮನಿಗೆ ಗೊತ್ತಾಗಿರಲಿಲ್ಲ.
“ಋಷಿ, ನೀನು ಹೋಗೋದ್ರೊಳಗೆ ಒಂದ್ ಸರಿ ಗಿರಿ ಕಡೆ ಹೋಗಿ ಸೂರ್ಯಾಸ್ತ್ರ ನೋಡೋಣ ಕಣೋ…”ಅಂದರು..
ಮಳೆಗಾಲ ಸೂರ್ಯ ಎಲ್ ಕಾಣ್ತಾನಮ್ಮಾ..???? ನೋಡೋಣ… ಅಂದೆ.
“ಅಮ್ಮ ಕ್ರಷ್ಣಪ್ಪನಿಗೆ ಫೋನ್ ಮಾಡಿ ಬೇಗ ಬರಕ್ಕೆ ಹೇಳಿ…..”
“ಅಯ್ಯೋ…!!!  ಅವರ ಮನೆಯಲ್ಲಿ ಫೋನ್ ಇಲ್ಲ…ನಿಮ್ಮಪ್ಪಾ ಒಂದು ಮೊಬೈಲ್ ಕೊಡಿಸಿದ್ರು…ಅದನ್ನ ಮಾರಿ, ಕುಡಿದುಕೊಂಡು ಹೋಗಿ ದೊಡ್ಡ ರಂಪ ಮಾಡಿದ್ನಂತೆ ಮನೇಲಿ….
ಆವಾಗಿಂದ ಅವನ ಸಂಬಳ ಕೂಡ ಅವ್ನ ಮಗಳ ಕೈಲೇ ಕೊಟ್ಟು ಕಳಿಸ್ತೀವಿ.”…ಅಂದ್ರು….
ಇವಾಗ್ಲೇನೋ ಕುಡಿಯೋದು ಬಿಟ್ಟಿದಾನೆ ಅಂತಿದ್ರು….ಒಂದಿನ ಬರ್ತಾನೆ ಇನ್ನೊಂದಿನ ಬರಲ್ಲ…ಇವತ್ತು ಬಂದ್ರೆ ನಿನ್ನ ಪುಣ್ಯ”.ಅಂದಾಗ ಯಾಕೋ ಸ್ವಲ್ಪ ಬೇಜಾರಾಯಿತು….ಇನ್ನೆರಡು ದೋಸೆ ಹೆಚ್ಚು ತಿಂದು….
ಅಮ್ಮ ಕ್ರಷ್ಣಪ್ಪನ ಮಗಳು ಏನ್ಮಾಡ್ತಾಳೆ????……
ಏನು ಮಾಡ್ತಿಲ್ಲ….ನಿಮ್ಮಪ್ಪ ನಿನಗೆ ಅವಳನ್ನ ಕಟ್ಟಬೇಕು ಅಂತಿದಾರೆ…ಅಂದು ನಕ್ಕರು…
ಅಮ್ಮಾ…!!!!!!!
ಅವಳು ಇವಾಗ 8ನೇ ಕ್ಲಾಸ್ ಮುಗಿಸಿ 9 ನೇ ಕ್ಲಾಸ್ ಟ್ಯೂಷನ್ ಗೆ ಹೋಗ್ತಿದಾಳೆ ಅನ್ಸತ್ತೆ…ಅಂದ್ರು….
ಇವತ್ತು ಭಾನುವಾರ ಮನೆಯಲ್ಲೇ ಇರ್ತಾಳೆ.
ಅಮ್ಮಾ ಆ ಕಂದನ ಹೆಸರು?????…
ಖುಷಿ ಅಂತ ಕಣೋ……ಅವಳ ಹತ್ತಿರ ಕೇಳು…ಮೂಡಿಗೆರೆಯ ಬಗ್ಗೆ ಒಂದು ಪುಸ್ತಕ ಬರಿಯಬಹುದು…ಚೂಟಿ ಹುಡುಗಿ. ತುಂಬಾ ಜಾಣೆ….ಅಂದರು.
ಸಮಯ ಎಂಟು ಘಂಟೆ ಆಗಿತ್ತು. ಅಪ್ಪನ ಹತ್ತಿರ ಕ್ರಷ್ಣಪ್ಪನ ಮನೆ ವಿಳಾಸ ತೆಗೆದುಕೊಂಡು…ಆ ಕಡೆ ಹೊರಡೆ (ಛತ್ರಿ ಹಿಡಿದು)…
ಚಿಕ್ಕದಾಗಿ ಮಳೆ ಬರುತ್ತಿತ್ತು….ಹತ್ತು ನಿಮಿಷ ನಡೆದಾಗ ಅಪ್ಪ ಹೇಳಿದ್ದ ಲ್ಯಾಂಡ್‌ಮಾರ್ಕ್ ಆಲದಮರ ಸಿಕ್ಕಿತು…
ಇವಳ್ಯಾರು ಈ ಮಳೇಲಿ ಖುಷಿ ಖುಷಿಯಾಗಿ ರಂಗೋಲಿ ಹಾಕುತ್ತಿದ್ದಾಳೆ????? mostly ಖುಷಿನೇ ಇರಬೇಕು….
ಖು…ಷೀ…!!??? ಅಂದೆ ಪಕ್ಕದಲ್ಲಿ ನಿಂತು…..
ಅವಳು ಒಂದೇ ಸಮನೆ ಭಯಬೀತಳಾಗಿ ನನ್ನ ಕಡೆ ನೋಡಿದಳು. ಅವಳ ಮುಖದ ತುಂಬಾ ಬರೀ ?????? ಗಳೇ…..
ಖುಷಿ……!!ನೀನು ಖುಷಿ ಅಲ್ವಾ????…!!!!
ನಾನು ನಾಯಕರ….ಮ…ಅನ್ನೋವಷ್ಟರಲ್ಲಿ ಅವಳು ಎದುರು ಮನೆಯನ್ನು ತೋರಿಸಿ….”ಅದು ಖುಷಿ ಮನೆ…” ಅಂದ್ಲು.
ಸುಮ್ನೆ ಒಂದು smile ಕೊಟ್ಟು ಆ ಕಡೆ ಹೊರಡೆ….
ರೈಲ್ವೇ ಸ್ಟೇಶನ್ ಗೆ ಹೋಗೋ ರೈಲು ಬಸ್ ಸ್ಟ್ಯಾಂಡ್ ಕಡೆ ಹೊರಟಿತ್ತು….
ಹಿಂತಿರುಗಿ “ರೀ ನಿಮ್ಮನ್ನ ಎಲ್ಲೋ….” ಅನ್ನೋವಷ್ಟರಲ್ಲಿ ಅವಳು ಹೋಗಿ ಬಿಟ್ಟಿದ್ದಳು….
ಎದುರು ಮನೆಗೆ ನಮ್ಮ ಪ್ರಯಾಣ…
ಆಗೋ ಈಗೋ ಮುರಿದು ಬೀಳಲಿರುವ ಕಟ್ಟಿಗೆಯ ಬೇಲಿ….ಅದಕ್ಕೆ ತಾತ-ಪುರಾತನ ಕಾಲದ ಬಿದಿರಿನ ಗೇಟು. ಹೂವುಗಳಿರದ ಹೂವಿನ ತೋಟ. ಬಾಳೆಯ ಗಿಡಗಳು….ಮಧ್ಯದಲ್ಲಿ ಒಂದು ಹೆಂಚಿನ ಮನೆ.
ಕ್ರಷ್ಣಪ್ಪ…… ಅಂತ ಗೇಟು ದಾಟಿ ಒಳ ನಡೆದೆ
ಕ್ರಷ್ಣಪ್ಪ…ಇದೀರಾ ಮನೆಲಿ????
ಯಾರು?? ಅಂತ ಒಂದು ಹೆಂಗಸು ಹೊರಗಡೆ ಬಂದಳು.
ಕ್ರಷ್ಣಪ್ಪ ಇದಾರಾ???
ಇಲ್ಲ. ಅವರು ಬೆಳಿಗ್ಗೇನೇ ನಾಯಕರ ಮನೆಗೆ ಕೆಲಸಕ್ಕೆ ಹೋಗಿದ್ದಾರೆ ನೀವ್ಯಾರು????
ನಾನು ನಾಯಕರ ಮಗ….ಋಷಿ ಅಂತ….!!!
ಬನ್ನಿ ಒಳಗೆ ಬನ್ನಿ…..
ಅವಳು ಕ್ರಷ್ಣಪ್ಪನ ಹೆಂಡತಿ ಅನಿಸುತ್ತೆ. ಒಳಗೆ  ಹೋಗಿ ಕುಳಿತುಕೊಂಡೆ.
ಹಳೆಯ ದುರಸ್ತಿಯಾಗಬೇಕಾದ ಮನೆ. ಅವರ ಪೂರ್ವಜರ ಭಾವ ಚಿತ್ರ, ತೊಟ್ಟಿಲಲ್ಲಿ ಆಳುತ್ತಿರುವ ಮಗು, ಅದರ ಆಟಿಕೆ ಸಾಮಾನು, ಗೋಡೆಗೆ ತೂಗು ಹಾಕಿದ 3 – 4 ಮೆಡಲ್ ಗಳು, ಕುಷಿಯ ಚಿಕ್ಕ ವಯಸ್ಸಿನ ಫೋಟೋ…..ಎಲ್ಲ black&white ಸಿನೆಮಾಕ್ಕೆ ಹೋದ ಹಾಗಿತ್ತು.
ಮನೆಯ ಬಾಗಿಲಿಗೆ “ಬಾಲಮಂಗಳ” ಪುಸ್ತಕದ ಒಂದು ಪೇಜ್ ಅನ್ನು ಕತ್ತರಿಸಿ ಹಚ್ಚಲಾಗಿತ್ತು.
ಹೋಗಿ ನೋಡಿದೆ. ಅದು ಬಾಲಮಂಗಳದ ಚಿತ್ರ-ವಾಕ್ಯ ಸ್ಪರ್ದೆಯದು.
 ನಾಯಿಗೊಂಬೆಗಳು ಮದ್ಯದಲ್ಲಿ ಎರಡು ಮಂಗನ ಗೊಂಬೆಗಳು…..
ಪ್ರಥಮ ಬಹುಮಾನ ಎಂದು ಕೆಳಗೆ
“ಏನಿದು ಮಂಗ???? ಹೇಗೆ ಮಾಡಿತು ಇಷ್ಟೆಲ್ಲ ನಾಯಿಗಳ ಸಂಗ…???” -ಕುಷಿ, ಮೂಡಿಗೆರೆ
ಅಷ್ಟರಲ್ಲಿ ಆಂಟೀ “ಟೀ ಕುಡಿಯಪ್ಪ…” ಅಂತ…ಟೀ ತಂದಿಟ್ಟರು.
ಸೈಕಲ್ ಬೆಲ್ ಕೇಳಿಸಿತು….
ಆಂಟೀ… ಕುಷಿ ಬಂದ್ಲು. ಅಂತ ಹೊರಗೆ ಹೋದರು.
ನನ್ನ ಬಲೂನುಗಳಿಗೆ ಮತ್ತು ಆ ಗೊಂಬೆಗಳಿಗೆ ಇದ್ದ ಹೋಲಿಕೆ ನನ್ನ ಗಮನಕ್ಕೆ ಬರಲಿಲ್ಲ…….
(ಮುಂದುವರೆಯುವುದು……..)

 

Leave a Reply

Your email address will not be published. Required fields are marked *