ಕಡಲು ಕುದಿಯುತಿತ್ತು..ಮತ್ತದೇ ಮೌನ. ನೀರವ ಶಾರದೆ ತಲೆಯಲ್ಲಿ ತುಂಬಿದ್ದ ಅಲ್ಪ ಸ್ವಲ್ಪ ಬುದ್ದಿಯು ಸ್ತಬ್ಧ….ಇಲ್ಲ…!! ಅದು ಸುಳ್ಳು.. ಅವಳು ಮಾತು ಮುರಿದರೂ ಅವಳು ಸರಿಯೇ…ತಪ್ಪು ನನ್ನದೇ ಇರಬಹುದೇನೋ ಅನ್ನೋ ವಿಚಿತ್ರ ಭಾವ..ಅದು ಅರಗಿಸಿಕೊಳ್ಳಲಾಗದ ಮನಸಿನ ಕಂಪನ. ಯಾವುದು ಸರಿ ? ಯಾವುದು ತಪ್ಪು ಎಂದು ನಿರ್ಧರಿಸಲು ಆಗದ ಕೆಲ ಕ್ಷಣ…. ಯಾರೋ ಹೇಳಿದ ಪಿಸುಮಾತು…ಯಾವುದೋ ಡಾಕ್ಟರ್ ಇರಬೇಕು…”ಅಂತ ಕ್ಷಣದಲ್ಲಿ ಭಾವುಕನಾಗದಿರು…ಧ್ಯಾನ ಮಾಡು…ಕೆಲವು ಒಳ್ಳೆಯ ಕ್ಷಣಗಳನ್ನು…ಅವಳೊಂದಿಗೆ ಕಳೆದ ನೆನಪುಗಳು..ಆಡಿದ ಮಾತುಗಳು..ನೆನೆಸಿಕೋ” ಅನ್ನೋ ಮಾತು… ಅಯ್ಯೋ ಆಗುತ್ತಿಲ್ಲ…!! ಅವರೇಕೆ ಹಾಗೆ ಹೇಳಿದರು? ನಾನು ಮಾನಸಿಕ ಅಸ್ವಸ್ಥನಾ? ಅಯ್ಯೋ…ಯಾಕೆ ಹೀಗಾಗ್ತಿದೆ ನನಗೆ?
ಅವಳು ನನ್ನವಳು. ನೆನಾಪುಗಳೇಕೆ? ಇದು ಸೊಪ್ಪಿನ ಮಹಿಮೆ…ಕೆಲವು ನಮ್ಮ ಚಿಂತನೆಯ ಗರ್ಭದ ಆಚೆ ಇರುವ ವಿಚಾರಗಳು ನಮ್ಮವು ಅನಿಸಿಕೊಳ್ಳಲು ತಲ್ಲಣಿಸುತ್ತಿವೆ. ಆಸ್ಪದ ನೀಡಬಾರದು…


