ನೀ….!!!

Image

ಆ ಹಳೆಯ ನೆನಪು ಮಧುರ,
ಎಂದಿಗೂ ಮನದಲ್ಲಿ ಹಸಿರು.
ಪಾರಿವಾಳದಂತೆ ಎದೆಯಾಗಿ ಹಗುರ.
ಹಾರುತ್ತಿದೆ, ಹುಡುಕುತ್ತಿದೆ ಹ್ರದಯದ ಉಸಿರು.

ನೀನು ನನ್ನಿಂದ ದೂರವಾದ ಕಾರಣ ತಿಳಿದಿಲ್ಲ.
ಆದರೂ ನೀನು ಸನಿಹ ಗೆಳತಿ.
ಹ್ರದಯ ರಹಿತ ನನ್ನೆದೆಯ ಬಡಿತ ನಿಲ್ಲಲ್ಲ,
ಇರುವವರೆಗೂ ನಿನ್ನ ನೆನಪುಗಳ ಪ್ರೀತಿ.

ನನ್ನ ನೆನಪುಗಳಲ್ಲಿ ನೀನು ಬದುಕಿರುವೆ
ಮೀನಿಗೆ ನೀರಲಿ ಮರೀಚಿಕೆ ಕಂಡಂತೆ.
ಪ್ರತಿ ಕ್ಷಣ ಜೊತೆಯಲಿರುವೆ
ದುಂಬಿಗೆ ಸಿಕ್ಕ ಜಾಲಿಯ ಹೂವಂತೆ.

ನಮ್ಮ ಪ್ರೀತಿಯ ಆದಿ ಅಂತ್ಯಗಳು
ನನ್ನ ಏಕಾಂತಕ್ಕೆ ನಗುತ್ತಿವೆ.
ಹೇಳುತ್ತಿದೆ ಆ ನೆರಳಿನ ಬೆಳದಿಂಗಳು
ನೀನು ನನಗಾಗಿ ಕಾದಿರುವೆ.

ಇಂದು ಕವನ ಬರೆದರೂ ಕವಿಯಾಗಲಾರೆ
ಕಾವ್ಯನಾಮವೆ(ನೀ) ಮರೆಯಾದಾಗ.
ಪ್ರೀತಿಸಿದರು ಅವಳ ಪ್ರಿಯತಮನಾಗಲಾರೆ
ಹ್ರದಯ ನಿನ್ನ ಬಳಿ ಇರುವಾಗ…….

Leave a Reply

Your email address will not be published. Required fields are marked *