ಕಾರಣ…..!!!!

                                        
ಎಂದೂ ಕೇಳದ ಕತ್ತಲ ಕೂಗು
ಎಲ್ಲೋ ಹುಡುಕಿದೆ ಎಂದೋ ಮರೆತ ಕಾರಣ.
ಕಾಣದ ಬೆತ್ತಲೆ ಚಂದ್ರನ ನೋಡಿ,
ಕಣ್ಣೀರಿನ ತರಂಗದಲಿ ಬರೆಯಿತು ಕಥೆಯನು…..
ಅದಕ್ಕೆ ಮಿಂಚುಳ್ಳಿಗಳ ಬೆಳಕಿನ ಅಲಂಕಾರ.

ಮರವುಗಳ ಮರೆಯಲ್ಲಿ ಮೂಡಿದೆ ಒಂದು ಕವನ,
ನಾನು ತಾನು ಎಂಬ ಉಚ್ಚಾರವಿಲ್ಲದೆ ಮೌನವಾಗಿದೆ ಪುಟ.
ಕಾನನದ ಕತ್ತಲು ಮುನ್ನುಡಿ ಬರೆದಿದೆ’
ಧ್ವಂಧ್ವದಲ್ಲಿರುವುದು ಒಂದೇ ಪದ ಅದು “ಕಾರಣ”.

ಬೆಳದಿಂಗಳಂತೆ ಅವಳು ಜೊತೆ ನಡೆದಳು,
ಕತ್ತಲು ಅವನಿಗೆ ಸ್ವಂತ,ಮರೆತನು ತನ್ನ ಹೆಸರ ಮೌನವಾಗಿ.
ನಮ್ಮ ಕಣ್ಣುಗಳ ಆಟದಲಿ ಕಣ್ಣೀರೇ ಅಪರಾದಿಯಾ? ಇಲ್ಲವೆಂದು ಒಂದು ಸನ್ನೆ ಮಾತ್ರ,ಮಾತಿಲ್ಲ…..
ಇಬ್ಬನಿಗೆ ಹಸಿರ ಹಾಡು ಕಲಿಸಲು ಹೊರಟಳು.
ಉಸಿರಾದಾವಳು ಕೊನೆಗೂ ಕೊಡಲಾರದೆ ಮರೆತಳು ಕಾರಣ.

ಆ ಕಥೆಗೆ ಬಾರಿ ಕೂಗೊಂದೇ ಪಾತ್ರ.
ಕಾಲ್ಪನಿಕ ಎಂಬುದು ಬರೀ ಒಳಾರ್ಥ,ನೆನಪುಗಳೇ ಈ ಹಾಡು.
ಅರಿಯದ ಮನಸು ಹರಿದ ಬಟ್ಟೆಯನ್ನುಟ್ಟು,
ಹುಡುಕುತಿದೆ ಅವಳ ಬಿಂಬ,ಹುಡುಕುತಿದೆ ಕಾರಣ…..

Leave a Reply

Your email address will not be published. Required fields are marked *