ಅದು 22nd ಜನವರಿ 2010.ಎಂದಿನಂತೆ ಅದೇ boring ಕ್ಲಾಸ್…ಅದೇ ಲಾಸ್ಟ್ ಬೆಂಚ್. ಅದೇ Bangalore mirror ನ ಸ್ಪೆಶಲ್ ಪೇಜ್. ಸಿಂಹ ತಂದಿದ್ದ ಚಿತ್ರಾನ್ನ…ಇದು ನಮ್ಮ ಪ್ರತಿದಿನದ ಉಟದ ನಂತರದ ಕ್ಲಾಸ್ಗಳಲ್ಲಿನ ದೈನಂದಿನ ಅಭ್ಯಾಸ.
ಎಲ್ಲದರ ಮೊದಲಿಗೆ ನಾವು ಈ ಸಿಂಹ ನ ಬಗ್ಗೆ ಸ್ವಲ್ಪ ತಿಳಿಯೋಣ.
ಹೆಸರಿಗೆ ಸಿಂಹ ಅಂತ ಇದ್ದರೂ ನೋಡೋದಕ್ಕೆ ಜಿಂಕೆ ತರ ಇದಾನೆ, ಆಕಳ ತರ ಗುಣ. ಪಶ್ಚಿಮ ಘಟ್ಟದಲ್ಲಿ ಹುಟ್ಟಿ ಬೆಳೆದ ನನಗೆ trek ಅನ್ನೋ ಪದದ ನಿಜವಾದ ಅರ್ಥ ಹೇಳಿ ಕೊಟ್ಟಿದ್ದು ಈದೇ ಸಿಂಹ ಅಲಿಯಾಸ್ ನರಸಿಂಹ.
ನಮ್ಮ ಟ್ರೆಕಿಂಗ್ ಗುರುಗಳು.
ಇದ್ದಕ್ಕಿದ್ದಂತೆ ಸಿಂಹ ಏನನ್ನೋ ನೆನಸಿಕೊಂಡು
“ವಿಶ್ವಾ…!!! ಕಳೆದ ತಿಂಗಳು ಅರವಿಂದನ friends ಟ್ರೆಕಿಂಗ್ ಹೋಗಿ ಕಾಡಲ್ಲಿ ಕಳೆದು ಹೋಗಿ, 1 ತಿಂಗಳ ನಂತರ ಅವರ ಅಸ್ಥಿಪಂಜರ ಕಾಡಲ್ಲಿ ಸಿಕ್ತಂತೆ. ಕತ್ತಲ್ಲಿರೋ ಗೋಲ್ಡ್ ಚೈನ್ ನೋಡಿ ಅವರ ಗುರುತು ಸಿಕ್ಕಿತಂತೆ ಮಗಾ……!!!”
ಹೌದಾ??? ಎಲ್ಲಿರೋದು ಆ ಜಾಗ???….ನಾನು ಕುತೂಹಲದಿಂದ ಕೇಳಿದೆ.
“ಗುಂಡ್ಯ ಹತ್ತಿರ…ನಾವ್ಯಾವಾಗ ಹೋಗೋದು????”
ನಾನು ಸುಮ್ಮನೆ ತಮಾಷೆ ಮಾಡ್ತಿದಾನೆ ಅಂತ ತಿಳ್ಕೊಂಡು “why not tonight????”…ಅಂದೆ…
ಅದು ಸೀರೀಯಸ್ ಆಗಿ ಹೋಗಿತ್ತು….
ಸಿಂಹ : ”ನಾನು ಬೇಗ ಮನೆಗೆ ಹೋಗಿ bag ಮತ್ತು ಟೆಂಟ್ ತಗೊಂಡ್ ಬರ್ತೀನಿ .. ಎಲ್ಲರಿಗೂ ಹೇಳಿಬಿಡು majestic ಬರಕ್ಕೆ….”
ಫ್ರೆಂಡ್ಸ್ ಎಲ್ಲರಿಗೂ ಟ್ರೆಕಿಂಗ್ ಹೋಗ್ತಿದೀವಿ ಅಂತ ಹೇಳಿದ್ವಿ. 6 ಜನ ರೆಡೀ ಆದ್ರು. ಎಲ್ಲಿಗೆ ಹೊರಟಿದೀವಿ ಅಂತ ಯಾರೂ ಕೇಳಿಲ್ಲ. ನಾವು ಹೋಗಲಿರುವ option ನನಗೆ & ಸಿಂಹನಿಗೆ ಬಿಟ್ಟರೆ ಯಾರಿಗೂ ಗೊತ್ತಿರಲಿಲ್ಲ.
next ಕ್ಲಾಸ್ನಲ್ಲಿ ಸಿಂಹ “ವಿಶ್ವಾ…!! ಬೀಜ(ಬಿಜಾಪುರದ ಹುಡುಗ) ಕೈ ಕೊಟ್ಟ. ಇವಾಗ ಇರೋದು 5 ಜನ. ಏನ್ಮಾಡೋದೊ????”
ನನ್ನ ಬಳಿ ಉತ್ತರವಿರಲಿಲ್ಲ. ನೋಡೋಣ ಅಂದೆ.
ಕೊನೆಗೆ ವತ್ಸ(ಶ್ರೀವತ್ಸ) ಬರ್ತೀನಿ ಅಂದಾಗ ನಮ್ಮ ಪ್ಲಾನ್ ರೆಡೀ ಆಗಿತ್ತು.
ಇಂದು ನಮ್ಮ group “kaad boys” ಅಂತ ಆಗಿದೆ.
ನಮ್ಮ ತಂಡದ ವಿಶೇಷತೆ ಅಂದರೆ ಯಾವುದೇ ಟ್ರೆಕ್ ಗೆ ಹೋದರೂ ಎಲ್ಲಿಗೆ ಹೋಗುತ್ತಿದ್ದೇವೆ ಅನ್ನೋದು bangalore ನ majestic ಬಸ್ ಸ್ಟಾಪ್ ನಲ್ಲಿ ನಿರ್ಧಾರ ಆಗತ್ತೆ.
sometimes it depends on the availability of buses.
so, ಎಲ್ಲರಿಗೂ ರಾತ್ರಿ majestic ಗೆ ಬರಲು ಹೆಳಿದ್ದಾಯಿತು.
ಯಲಹಂಕದ ನಮ್ಮ hostel ನಿಂದ ನಾವು ಹೊರಟು majestic ಸೇರಿದಾಗ ಸಮಯ 10 ಘಂಟೆ.
ನಾನು
ನರಸಿಂಹ
ವೆಂಕ
ವತ್ಸ
ಶಿವು
ವಿಜಯ್
150 ಚಪಾತಿ
glucose
ಚಟ್ನಿ ಪುಡಿ ಪ್ಯಾಕೆಟ್-4
1 ಟೆಂಟ್(4 ಜನ ಮಾತ್ರ ಮಲಗಲು ಸಾಧ್ಯ ಅದರಲ್ಲಿ)
ಊಟ ಮಾಡಿ ಎಲ್ಲರೂ ಮೆಜೆಸ್ಟಿಕ್ ನ ಚಿಕ್ಕಮಗಳೂರು ಪ್ಲ್ಯಾಟ್‌ಫಾರ್ಮ್ನಲ್ಲಿ ಸೇರಿದ್ವಿ.
ಸಿಂಹ -”ನೋಡಿ ನಮ್ಮ ಹತ್ತಿರ ಎರಡು option ಇದೆ.
1.ಒಂಬತ್ತು ಗುಡ್ಡ- ದಾರಿ ಇಲ್ಲ. restricted ಫಾರೆಸ್ಟ್. ಮ್ಯಾಪ್, ಕಂಪಾಸ್ ಜೊತೆ north ಡೈರೆಕ್ಶನ್ ಕಡೆ along the river ನಡೀಬೇಕು.
2.ಎತ್ತಿನ ಭುಜ – ಆರಾಮಾಗಿರತ್ತೆ
ಏನು ಮಾಡೋದು????”
ಎಲ್ಲರ ನಿರ್ಧಾರ as expected no.1 ಆಗಿತ್ತು.
ಅದೇ ಪ್ಲ್ಯಾಟ್‌ಫಾರ್ಮ್ ನಲ್ಲಿದ್ದ ಕೆಂಪು ಬಣ್ಣದ bus ಹತ್ತಿ ಕುಳಿತಾಗ ಸಮಯ ರಾತ್ರಿ 11:38……
(to be continued…….)
http://www.bangaloremirror.com/index.aspx?page=article§id=1&contentid=2012020620120206010709894946e79d6


One Comment
We have renamed our trekking-team as “Kaad Boyz” (which was “charanigaru” initially).
Our peculiarity lies in the fact that we decide upon our trekking spot only at Majestic Bus Terminal – juz a few minutes before we leave…. Most of the times it depends on the availability of the buses…. We ourselves will have very little clue as to where we will be landing the next day – of course greater uncertainties lies ahead (which the Mother Nature will treasure for us as always – it’s thrilling to solve her riddles). Every single trek brings out a new person in us. Har baar prakruthi ke baahon mein jaa girna hi ek khubsoorat anubhav hai…. We guyz, here at Kaadboyz would love to literally GET LOST a midst the Jungles n Mountains! Truly amazing – juz like the Boyzzzzzzz 🙂