Home / ನಾವು ಕವಿಗಳಾದಾಗ...!!!!! / ಈ ಮರೆವು ನಿನಗಿಷ್ಟ!!!!

ಈ ಮರೆವು ನಿನಗಿಷ್ಟ!!!!

ಅದು 2010 feb 14. ಸುಮ್ನೆ ರೇಡಿಯೋ ಟ್ಯೂನ್ ಮಾಡಿ fever 104 fm ಕೇಳುತಿದ್ದೆ. ಏನೋ love letter ಕಾಂಟೆಸ್ಟ್ ಅಂತ ಹೇಳಿದ್ರು.
ಸುಮ್ನೆ ಟ್ರೈ ಮಾಡೋಣ ಅಂತ ಒಂದು letter ಬರೆದು text ಮಾಡಿದೆ. ಕೇವಲ 10 ನಿಮಿಷದಲ್ಲಿ ಬರೆದ letter ಗೆ ಬೆಸ್ಟ್
love letter ಅವಾರ್ಡ್ ಬಂದಿತ್ತು.

ಆ ಲೆಟರ್ ಎಲ್ಲಿ ಕಳೆದು ಹೋಯಿತು ಅಂತ ನೆನಪಿಲ್ಲ…

ಅಲ್ಲಿ use ಮಾಡಿದ ಕೆಲವು words & theme use ಮಾಡಿ ಈ ಕವನ ಬರೆದಿರುವೆ.

Image

ಕೈ ಹಿಡಿದು ನಡೆದ ದಾರಿಯ ನೆನಪಿದೆ
ವೀಣೆ ತಂತಿಯಲಿ ಮೂಡಿದ ಬೆರಳುಗಳ ಗುರುತಿದೆ
ನಾವಿಬ್ಬರೂ ಕಂಡ ಒಂಟಿ ಕನಸದು ಸಪ್ತಪದಿ.
ಆ ಕನಸಲ್ಲೂ ನಿನ್ನ ಕೈ ಅಳತೆಯಿದೆ.

ಮರೆವು ನನ್ನ ಇಷ್ಟ ಪಟ್ಟ ಒಂದು ಕಾರಣ ಅಂದಿದ್ದೆ ನೀನು
ನಡೆದ ದಾರಿಯಲ್ಲೆಲ್ಲಾ ನಿನ್ನದೇ ಗುರುತುಗಳು.
ನಿನ್ನ ಪುಟ್ಟ ಕೈಗಳಲ್ಲಿ ಬಳೆಗಳಿಲ್ಲ, ಮರೆತೆಯೇನು????
ಕೇಳಿದ ನನಗೆ ನೆನಪಿದೆ ನಿನ್ನ ಉತ್ತರದ ಮಾತುಗಳು.

ನೀನು ಚಂದಿರನ ಕೇಳಲಿಲ್ಲ. ಅದರ ಬೆಳಕ ಬಯಸಲಿಲ್ಲ,
ನಿನಗದರ ನೆರಳ ಜೊತೆಗೆ ನಾನು ಸಾಕಾಗಿತ್ತು
ಬಳೆಗಳ ಪ್ರಶ್ನೆಗಳ ಉತ್ತರದಲಿ ಕಾಲ್ಗೆಜ್ಜೆಯ ನೋಡಲಿಲ್ಲ.
ಅದು ಅಮಲು, ನಿನಗೆ ಬಳೆ ತೊಡಿಸುವುದಾಗಿತ್ತು.

ನಿನಗಾಗಿ ನೀರಲ್ಲಿ ಸೆರೆಹಿಡಿದಿರುವೆ ಚಂದ್ರನ ನೆರಳು
ಹೊಸ ಗೆಜ್ಜೆಯಲಿ ಮೂಡಿಸಿರುವೆ ಅಲೆಗಳ ಬಳೆಗಳು.
ಈ ಮರೆವು ನಿನಗಿಷ್ಟ!!!…ನಾನು ಬಳೆಗಳ ಅಳತೆ ಮರೆತವನು
ಬಂದು ಇನ್ನೊಮ್ಮೆ ಅಳತೆ ಕೊಡು, ಚಂದಿರ ಮಲಗುವ ಮೊದಲು.

One Comment

Leave a Reply

Your email address will not be published. Required fields are marked *