ಫೆಬ್ 14…ವ್ಯಾಲಿಂಟೈನ್ ಡೇ…ಈ ದಿನ ನನ್ನ blog ನಲ್ಲಿ ಏನಾದರೂ publish ಮಾಡಬೇಕು ಎಂದು ಈ ದಿನಕ್ಕೆ ರಿಲೇಟ್ ಆಗೋ ಪ್ರೀತಿನಾ ಒಂದು Angle ಇಂದ ಯೋಚನೆ ಮಾಡೋಣ ಅಂದುಕೊಂಡೆ. ಹಾಗೆ ಎಲ್ಲ ಫ್ರೆಂಡ್ಸ್ ನಾ ಕರೆದು ನಿಮ್ಮ ನಿಮ್ಮ ಅನುಭವಗಳನ್ನ ಹೇಳಿ ನನ್ನ blog ಗೆ ಒಂದು ಚಿಕ್ಕ ಲೇಖನ ಬರೆಯಲು ಸಹಾಯ ಮಾಡಿ ಅಂದಾಗ ಯಾರೂ ಒಲ್ಲೆ ಅನ್ನಲಿಲ್ಲ.
ಚಿಕ್ಕ ವಯಸ್ಸಿನಲ್ಲಿ ಶುರುವಾದ ಆ ಚಕ್ರ ಎಲ್ಲರ ಜೀವನದಲ್ಲಿ ಇನ್ನೂ ತಿರುಗುತ್ತಲೇ ಇದೆ. ಕೆಲವೊಂದು ಬಾಲಮಂಗಳದ ಪುಟ್ಟ ಕಥೆಗಳಂತೆ. ಇನ್ನೂ ಕೆಲವು ಸಿನೆಮಾ ಗಳಂತೆ. ಆ ಮಧ್ಯದಲ್ಲಿ ಇಂಟರ್ವಲ್ ಗಳು, ನಮ್ಮ ಹಳೆಯ DD ನ್ಯಾಶನಲ್ ಚ್ಯಾನೆಲ್ ನ ಮೂವೀ ಆದರೆ ಅದರ ಜೊತೆ ಬರುವ ಸಿಕ್ಕಾಪಟ್ಟೆ ಅಡ್ವರ್ಟೈಸ್ಮೆಂಟ್ ಗಳಂತೆ…..ಹತ್ತು ಹಲವು ಬೇರೆ ಬೇರೆ ಸ್ಟೋರೀ ಗಳು. ಕೆಲವು ಕಾಲ್ಪನಿಕ ಗಳಂತಿದ್ದರೆ, ಇನ್ನೂ ಕೆಲವು ಕಣ್ಣ ಮುಂದೆ ನಡೆದ ಘಟನೆಗಳಾಗಿದ್ದವು.
ಎಲ್ಲರ ಹಳೆಯ ನೆನಪುಗಳನ್ನು ಮೂಟೆ ಕಟ್ಟಿ, ಕಣ್ಣು ಮುಚ್ಚಿ 10 ನಿಮಿಷ Recap ಮಾಡಿ Remix ಮಾಡಿದಾಗ ಮೂಡಿದ ಸಂಚಲನದಲ್ಲಿ ಆಯ್ಕೆಯಾದ ಕೆಲವೇ ಕೆಲವು ಅಂಶಗಳು ಇಲ್ಲಿವೆ.
ಆ ನೆನಪಲ್ಲಿ……..
* ಅವಳಿಗಾಗಿ ಬರೆದ Examನ Result ಇತ್ತು.
* ಕುಂಟೆ ಬಿಲ್ಲೆ ಆಟದ ಜಗಳವಿತ್ತು
* ಕಣ್ಣಾ ಮುಚ್ಚಾಲೆ ಆಟ ಅರ್ಧಕ್ಕೆ ಮುಗಿದಿತ್ತು.
* ಭಾವಿ ಇಂದ ನೀರು ಸೇದಿದ ಅವಳ ಕೊಡವಿತ್ತು.
* ಟೀವೀ ಪಕ್ಕದ ಕನ್ನಡಿಯಲಿ ನೋಡಿದ ಅವಳ ಮುಖವಿತ್ತು. ಅವಳ ಕೂದಲು ಕಣ್ಣಿಗೆ ಅಡ್ಡವಿತ್ತು.
* ತೀರದಲಿ ನಡೆದ ಹೆಜ್ಜೆಗಳಿದ್ದವು,ಹಳೆಯ camera ದ ರೀಲ್ ನ 36 ಫೋಟೋ ಗಳಲ್ಲಿ 29 ಅವಳದಾಗಿತ್ತು.
* ಇವಳು ಕೊಟ್ಟ Key-chain ನ ಬಣ್ಣ ಮಾಸಿತ್ತು.
* High school ನ Window ಮುಚ್ಚಿತ್ತು.
* SSLC exam ದಿನ ಬೆಳಿಗ್ಗೆ 4AM ನ Coffee ಇತ್ತು.
* ಕರಾವಳಿ ಉತ್ಸವದ ಸಂಗೀತವಿತ್ತು.
* ಅಕ್ಕನ ಮದುವೆ ದಿನವಿತ್ತು.
* PUC ಮೊದಲನೇ ವರ್ಷದ English Exam ಇತ್ತು.
* PUC ಎರಡನೇ ವರ್ಷದ Physics ಲ್ಯಾಬ್ ಇತ್ತು. ಆ ದಿನದ ಮಳೆಯೊಂದಿಗೆ ಬುಲೆಟ್ ರೈಡ್ ಇತ್ತು.
* Tution ನ ಸೈಕಲ್ ಸ್ಟ್ಯಾಂಡ್ ನ ಲೇಡೀ ಬರ್ಡ್ ಸೈಕಲ್ ಇತ್ತು.
* scooty ಪೆಪ್ ನ ನಂಬರ್ ಪ್ಲೇಟ್ ನ ನಂಬರ್ ಅಳಿಸಿ ಹೋಗಿತ್ತು.
* ಮಳೆಯಲಿ ಅವಳಿಗೆ ಕೊಟ್ಟ ನನ್ನ ಜ್ಯಾಕೆಟ್ ಅವಳು ಕೊಟ್ಟ ಕಾದಂಬರಿಯೊಂದಿಗೆ ಎಲ್ಲೋ ಕಳೆದು ಹೋಗಿತ್ತು.
* ಉಡುಪಿ ಕೃಷ್ಣ ನೀನು ಅಂತ ಹೇಳಿ ಕೊಟ್ಟ ಕೃಷ್ಣನ ಮೂರ್ತಿ ಇತ್ತು.
* ಲಾಲ್‌ಬಾಗ್ ನ ಗೇಟ್ ಇತ್ತು.
* NCC ಕ್ಯಾಂಪ್ ಇತ್ತು.
* Hostel ನ 3rd ಫ್ಲೋರ್ window ಇತ್ತು, ಅದರ ಹಿಂದಿರುವ ಹುಡುಗಿಗೆ ಕನ್ನಡಿ ಅಡ್ಡವಾಗಿತ್ತು.
* 99 ಮಿಸ್ಡ್ ಕಾಲ್ಸ್ ಇತ್ತು.
* ಮಡಿಕೇರಿ ವೈನ್ ಇತ್ತು.
* ಕೊಳ್ಳೇಗಾಲದ ಮಸಾಲೆ ದೋಸೆ ಇತ್ತು.
* Railway ಟ್ರ್ಯಾಕ್ ಪಕ್ಕದ ಮಾಸಲಾ ಪುರಿ ಇತ್ತು. Railway ಗೇಟ್ ಬೇರೆ ಮುಚ್ಚಿತ್ತು.
* ಗೋವಾ ಬೀಚ್ ಇತ್ತು, ಅಲ್ಲಿ ಪುಟ್ಟ ಜಗಳವಿತ್ತು.
* ಕರೆನ್ಸೀ ಅಂಗಡಿ ಇತ್ತು.
* ಕಾಲೇಜ್ ನ ಮೆಟ್ಟಿಲುಗಳಿದ್ದವು,ಅಲ್ಲಿ ಆಡಿದ ಮಾತುಗಳಿದ್ದವು.
* Bangalore-Hassan ಟ್ರೈನ್ ಇತ್ತು, ಜೊತೆಯಲಿ ಕ್ಯಾನನ್ ಕ್ಯಾಮರ.
* Majestic ಇಂದ ನನ್ನನ್ನೇ ಬಿಟ್ಟು ಹೋಗುತ್ತಿದೆ ಎಂಬ ಸುಮಾರಷ್ಟು ಬುಸ್ ಗಳಿದ್ದವು.
* ಹೊಸ ಬುಲೆಟ್ ನ ಮಿರರ್ ನಲ್ಲಿ ಅವಳ ಮುಖವಿತ್ತು.
ಸಾಕು…ಸಾಕು…… Thats itt
ಅದರ ಜೊತೆಗೆ ಅವಳು ನನ್ನ pruposal ಒಪ್ಪಿಕೊಳಲ್ಲ ಅಂದ್ರೆ ನಾನು ಸ್ಕೂಲ್ ಬಿಡ್ತೀನಿ ಅಂತ ಗೆಳೆಯ ಅಂದಾಗ ಮರು ಮಾತನಾಡದೆ ನೇರವಾಗಿ ಆ ಹುಡುಗಿಯ ಮನೆಗೆ ಹೋಗಿ ಕನ್ನಡ ಭಾಷೆ ಬರದ ಅವರ ಮನೆಯವರ ಮುಂದೆ ಅವಳ ಜೊತೆ ಮಾತನಾಡಿದಾಗ ಮನೆಯ ಹೊರಗೆ ನಿಲ್ಲಿಸಿದ್ದ ಹೆರ್ಕುಲಸ್ ಸೈಕಲ್ ಇತ್ತು. ಅದರ ಪಕ್ಕ ನನ್ನ ಬೆಸ್ಟ್ ಫ್ರೆಂಡ್ ಜೋಸೆಫ್ ನಿಂತಿದ್ದ.


2 Comments
Nimma hudugi thumba lucky kanri…….kavi/kathegarannanu priyathamanagi padeddidhalae
Haha…… better u use /ru and /re 😛