Home / ಭಾವನೆಗಳ ಬಾಗಿಲು ತೆರೆದು / ಇದು ಆಟೋ ಡ್ರೈವರ್ ಕಥೆ

ಇದು ಆಟೋ ಡ್ರೈವರ್ ಕಥೆ

ಬೆಂಗಳೂರು ರೈಲ್ವೆ ಸ್ಟೇಷನ್ ನ ಹೊರಗೆ ಆಟೋಗಳಿಗೇನು ಕಮ್ಮಿ ಇರಲಿಲ್ಲ…ಮುಂಜಾನೆ 7 ಘಂಟೆ ಅದು. ಗುರು ವಿಲ್ಸನ್ ಗಾರ್ಡನ್ ಬರ್ತಿರಾ?? ಅಂದರೆ ಎಲ್ಲರು 200 ಆಗತ್ತೆ.. oneAndHalf ಆಗತ್ತೆ ಅನ್ನೋರೆ ಜಾಸ್ತಿ ಇದ್ದರು. ಆದರೆ ಅವನು ಮಾತ್ರ ಮೀಟರ್ ಹಾಕ್ತೀನಿ ಅಂದಾಗ ಅಬ್ಬಾ ಮೀಟರ್ ಗೆ ಅರ್ಥ ಇದೆ ಅನ್ಸಿತ್ತು.

ನನ್ನ ಹತ್ತಿರ ಇದ್ದಿದ್ದೆ 250 ರೂಪಾಯಿಗಳು, ಮತ್ತೆ ಚಿಲ್ಲರೆ ಪಿಲ್ಲರೆ….. ಹುಬ್ಬಳ್ಳಿಯಿಂದ ಬಂದಿದ್ದಕ್ಕೆ ಟ್ರೈನ್ ಗೆ ಕೊಡೊ ಚಾರ್ಜ್ ಗಿನ ಆಟೋ ಗೆ ಜಾಸ್ತಿ ಕೊಟ್ಟರೆ ಹೆಂಗ್ ಗುರು ಜೀವನ ಮಾಡೋದು..??? ನೀವು ಆಟೋ ಡ್ರೈವರ್ ಗಳು software ಅವ್ರ್ಗಿನ ಒನ್ನ್ದ್ ಕೈ ಮೇಲೆ ಅನ್ನಿ… ಅನ್ನೋ ನನ್ನ ಮಾತಿಗೆ ಆ ವಯ್ಯಾ…..

ಆಟೋ ದವರಿಗೂ ಕಷ್ಟ , ಸಾಲ ..ಅದು ಇದು ಇರತ್ತೆ ಸರ್ ಅಂದ….

ನಾನು ಇರಬಹುದೇನೋ.. ಅಂದುಕೊಂಡು ಸುಮ್ಮನಾದೆ ….ಅವನೂ ಸ್ವಲ್ಪ ಹೊತ್ತು ಮಾತನಾಡಲಿಲ್ಲ.

ಆಟೋ ಆನಂದರಾವ್ ಸರ್ಕಲ್ ದಾಟಿ ಕಾರ್ಪೋರೇಶನ್ ಕಡೆ ಹೊರಟಿತ್ತು. ಅಷ್ಟರಲ್ಲಿ ಅವನಿಗೆ ಯಾವುದೋ ಕಾಲ್ ಬಂದು…”ಹೌದಾ…?? ಇನ್ನ ಅರ್ಧ ಗಂಟೇಲಿ ಬರ್ತೀನಿ..!! ಚಿನ್ನು ಹುಷಾರಾಗಿದಾಳ?? ಬಂದೆ..ಬಂದೆ….” ಅವನ ಸ್ವರ ಗದ್ಗದಿತವಾಗಿತ್ತು.ಸಿಗ್ನಲ್ ಅಲ್ಲಿ ರೆಡ್ ಲೈಟ್ ಬೇರೆ ಇತ್ತು.

ಏನಾಯ್ತು ಗುರು? ಅಂದೆ.

ಅವನು “ಏನಿಲ್ಲ ಸರ್… ನನ್ನ ಹೆಂಡತಿಗೆ ಒಂಬತ್ತು ತಿಂಗಳಾಗಿತ್ತು..ನಿನ್ನೆ ಇದ್ದಕ್ಕಿದ್ದಂಗೆ ಹೊಟ್ಟೆನೋವು ಜಾಸ್ತಿ ಆಯಿತು. ಡಾಕ್ಟರ್ ಆಪರೇಷನ್ ಮಾಡಕೆ 6000 ಖರ್ಚಾಗತ್ತೆ ಅಂದ್ರು..ಅಷ್ಟು ಬೇಗ ಹೇಗೆ ಹಣ ಹೊಂದ್ಸೋದು ?? ಅದಿಕ್ಕೆ ಮನೆಗೆ ಕರ್ಕೊಂಡ್ ಬಂದೆ.. ಇವಾಗ ನೋಡಿದ್ರೆ ಮಗು ಹೊಟ್ಟೆಯಲ್ಲೇ ಸತ್ತೋಗಿದೆ ಅಂತೆ…ನಿಮ್ಮನ್ನ wilson garden ಬಿಟ್ಟು ಹಾಸ್ಪಿಟಲ್ ಗೆ ಹೋಗ್ತೀನಿ.” ಅಂದ…..

ಆಟೋ ನ ಸೈಡ್ ಗೆ ಹಾಕು ಗುರು ಅಂತ ಹೇಳಿ ನನ್ನ ಹತ್ತಿರ ಇದ್ದ 200 ರೂಪಾಯಿ ಕೊಟ್ಟು..ನೀವು ಹೋಗಿ…ಅಂತ ಹೇಳಿ ಅಲ್ಲೇ ದೂರದಲ್ಲಿದ್ದ ಲಾಲ್ಭಾಗ್ ಬಸ್ ಸ್ಟಾಪ್ ಕಡೆ ಹೊರಟೆ…ನನ್ನ ಕಣ್ಣು ನೀರು ತುಂಬಿಕೊಂಡಿತ್ತು.

ದಾರಿಯಲ್ಲಿ ಅವನ ಪರಿಸ್ಥಿತಿ ನೆನೆದರೆ… ದೇವರು ಕಷ್ಟ ಅನ್ನೋದನ್ನ ಹೀಗೂ ಕೊಡ್ತಾನ ಅನ್ನಿಸಿತು. ಯಾವುದೋ ತಾಯಿ ಕನಸು ಕಳೆದುಕೊಂಡರೆ.. ಬಡವರು ಹೊಂದಿಸಲಾಗದ ಕೇವಲ 6000 ರೂಪಾಯಿಗಾಗಿ ಆ ಪುಟ್ಟ ಕಂದಮ್ಮ ತಾಯಿಯ ಗರ್ಭದಲ್ಲೇ ಕೊನೆಯ ಬಾರಿ ಅತ್ತಿತ್ತು….ಕೆಲವೊಂದು ಕೆಲವೊಮ್ಮೆ ಅನಿವಾರ್ಯವಾಗಿರುತ್ತದೆ.ಆಕಸ್ಮಿಕ ಅನ್ನೋದೂ ಅನಿವಾರ್ಯವಾದರೆ…???
ನಾವು ನೀವು ಕಾಲಿಗೆ ಧರಿಸೋ ಒಂದು shoes ಅಂತಾನೆ ಇಟ್ಕೋಳಿ.. ಅಡಿಡಾಸ್/ರೀಬಾಕ್ ಅನ್ಕೊಂಡು ಕರ್ಚು ಮಾಡೋ ಆ 6000 ರೂಪಾಯಿಗಳು ಆ ಕ್ಷಣ ತುಂಬಾ ದೊಡ್ಡದು ಅನಿಸಿತ್ತು ನನಗೆ…. ಆ ಪುಟ್ಟ ಕಂದಮ್ಮನ ಜೀವದ ಬೆಲೆ ಅಷ್ಟೇನಾ? ಅದನ್ನು ಹೊಂದಿಸೋದು ಕಷ್ಟಾನಾ?? ಅಯ್ಯೋ ದೇವರೇ…!!
ದುಡ್ಡು ಅನ್ನೋದು ಯಾವ ಥರ ಆಟ ಆಡಿಸತ್ತೆ ಅಲ್ವಾ? ಪಾಪ ಎಷ್ಟೋ ಜನರು ಒಂದು ಹೊತ್ತಿನ ಊಟಕ್ಕಾಗಿ ಬೆವರಿನ ಜೊತೆ ರಕ್ತ ಸುರಿಸುತ್ತಾರೆ.ಕಷ್ಟ ಅನ್ನೋದು ಎಲ್ಲರಿಗು ಇರತ್ತೆ.. ಅದನ್ನ ನಾವು ಹ್ಯಾಂಡಲ್ ಮಾಡೋ ರೀತಿ ನಮ್ಮಲ್ಲಿ ಶ್ರೀಮಂತ-ಬಡವ ಅನ್ನೋ ವ್ಯತ್ಯಾಸ ಕೊಡತ್ತೆ.ಬೇರೆಯವರ ಕಷ್ಟ ಹಂಚಿಕೊಳ್ಳಿ.ನಮ್ಮಿಂದ ಇನ್ನೊಬ್ಬರಿಗೆ ಖುಷಿಯಾದಾಗ, ನಮ್ಮ ಒಂದು ಮಾತು ನೊಂದ ಜೀವದ ಮುಖದ ಮೇಲೆ ನಗು ಮೂಡಿಸಿದಾಗ,ಸಿಗೋ kick ಏ ಬೇರೆ ಕಣ್ರೀ….ಜಾತಿ-ಧರ್ಮ,ಬಣ್ಣ ಎಲ್ಲ ಪಕ್ಕಕ್ಕಿಟ್ಟು ಸ್ವಲ್ಪ ಬೇರೆಯವರ ಪಾಲಿನ ನಗುವಾಗೋಣ.
girlfriend ಗೆ ಕೊಡ್ಸೋ 2 ಚಾಕಲೇಟ್ ನಲ್ಲಿ 1 ಮೈನಸ್ ಮಾಡಿ ಆ ದುಡ್ಡನ್ನ ಯಾವುದೊ ಅನಾಥಾಶ್ರಮ, ಇಲ್ಲ ಯಾವುದೋ ಒಳ್ಳೇ ಸಂಘ ಸಂಸ್ಥೆಗೆ ದಾನ ಮಾಡಿದ್ರೆ ಹುಡುಗಿ ಕೋಪ ಮಾಡ್ಕೋತಾಳಾ?? ನನ್ ಹುಡುಗಿ ಮಾಡ್ಕೊಳಲ್ಲಪ್ಪ…!!
ನಮ್ಮ ಗುರುಗಳು ಹೇಳುತ್ತಿದ್ದರು- ನೀನು ದಾನ ಮಾಡೋದು ಒಂದು ಥರ savings ಇದ್ದ ಹಾಗೆ ಅಂತ.ನಿಜ ಅನ್ಸತ್ತೆ.ಏನೇ ಮಾಡಿದರು ಎಂಡ್ ಆಫ್ ದಿ ಡೇ ಮನಸು ಖುಷಿಯಾಗಿರಬೇಕು.ಎಲ್ಲರು ಖುಷಿಯಾಗಿರಬೇಕು.

ಸರ್ಕಾರ ಸೀರೆ,ಮದ್ವೆ ಅನ್ನೋ ಯೋಜನೆ ಬದಲು ಬಡವರ ಆರೋಗ್ಯದ ಕಡೆ ಸ್ವಲ್ಪ ಗಮನ ಹರಿಸಲಿ. ಅವರ ಯೋಜನೆಗಳು ಜನರ ಮನೆ ತಲುಪಲಿ. ಪಾಪ ಆ ಮಗುವಿನ ಆತ್ಮಕ್ಕೆ ಶಾಂತಿ ಸಿಗಲಿ ಅಂತ ಎಲ್ಲ ಯೋಚನೆ ಮಾಡೋ ಅಷ್ಟರಲ್ಲಿ ಮನೆ ತಲುಪಿದ್ದೆ. ಇನ್ನೂ ಅವನ ಮಾತುಗಳೇ ಕಿವಿಯಲ್ಲಿ ಗುನುಗಿಡುತ್ತಿತ್ತು.ಅವನ ಪರಿಸ್ಥಿತಿಗೆ ಮತ್ತೆ ಕಣ್ಣು ಒದ್ದೆಯಾಗಿತ್ತು.ಕೊನೆಗೆ ಮತ್ತೆ ಮೂಡಿದ ಪ್ರಶ್ನೆ…. ಈ ಆಟೋ ಡ್ರೈವರ್ ಯೂನಿಯನ್ ಅವ್ರು 6000 ಕೊಡಕ್ ಆಗ್ತಿರ್ಲಿಲ್ವಾ ಅವನಿಗೆ? ಅಂತ….. ಉತ್ತರ ಇರಲಿಲ್ಲ….

One Comment

  • Very unfortunate situation bro. Feels very bad.

    Coming to the article, Tumba chennaagi bardideeya Vishwa… I liked the way it is presented. Want to see more from you..

Leave a Reply

Your email address will not be published. Required fields are marked *